- Advertisement -
- Advertisement -



ಬಂಟ್ವಾಳ ತಾಲೂಕಿನ ವೀರಕಂಭ ಗ್ರಾಮದ ಕುಮೇರು ಎಂಬಲ್ಲಿನ ಕಾಲು ಸಂಕದ ಬದಿಗೆ ಕಟ್ಟಿದ ತಡೆಗಡೆಯು ವಿಪರೀತ ಮಳೆಗೆ ಕುಸಿದಿದ್ದು, ಅಪಾಯದ ಸ್ಥಿತಿಯಲ್ಲಿದೆ.
ಈ ದಾರಿಯಲ್ಲಿ ವೀರಕಂಭದಿಂದ ಕುಮೇರು, ಕೆಮ್ಮಟೆ, ಲಾಡ, ಸಿಂಗೇರಿ, ಕಿನ್ನಿ ಮೂಲೆ, ಗುಡ್ಡೆ ತೋಟ ಪ್ರದೇಶದ ನಿವಾಸಿಗಳು ಈ ದಾರಿಯನ್ನೇ ಅವಲಂಬಿತರಾಗಿದ್ದಾರೆ.
ದಿನ ನಿತ್ಯ ಶಾಲಾ ಮಕ್ಕಳು ಹಾಗೂ ಗ್ರಾಮಸ್ಥರು ಈ ಕಾಲು ಸಂಕದ ಮೇಲಿಂದಲೇ ನಡೆದುಕೊಂಡು ಬರುವುದರಿಂದ ಅಪಾಯ ಸಂಭವಿಸುವ ಮೊದಲೇ ಇದರ ತುರ್ತು ರಿಪೇರಿ ಮಾಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
- Advertisement -








