Sunday, April 28, 2024
spot_imgspot_img
spot_imgspot_img

ಕಾಸರಗೋಡು: ಮಹಿಳೆಯರೇ ಮುನ್ನಡೆಸುತ್ತಿರುವ ಗ್ಯಾರೇಜ್.!

- Advertisement -G L Acharya panikkar
- Advertisement -

ಕಾಸರಗೋಡು: ಮಹಿಳೆಯರೂ ಪುರುಷರಷ್ಟೇ ಸಮಾನರು ಎಂಬಂತೆ ಇಲ್ಲಿ ಮೂವರು ಮಹಿಳೆಯರು ಸೇರಿ ಟೂ ವಿಲ್ಲರ್ ಗ್ಯಾರೇಜ್ ಒಂದನ್ನು ಪ್ರಾರಂಭಿಸಿದ್ದು ಇವರ ಕಾರ್ಯಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

ಮೂಲತಃ ಕಾಸರಗೋಡಿನವರಾದ ಮೂವರು ಪ್ರಾರಂಭಿಸಿದ ಈ ಗ್ಯಾರೇಜ್ ಕೇರಳದ ಮೊಟ್ಟ ಮೊದಲ ಬಾರಿಗೆ ಮಹಿಳೆಯರೇ ಮುನ್ನಡೆಸುತ್ತಿರುವ ಗ್ಯಾರೇಜ್ ಆಗಿದೆ.

ಬಿನ್ಸಿ, ಮರ್ಸಿ, ಬಿಂಟು ಎಂಬ ಮೂವರು ಮಹಿಳೆಯರು ಸೇರಿಕೊಂಡು ಈ ಗ್ಯಾರೇಜ್ ಪ್ರಾರಂಭಿಸಿದ್ದು. ಕೇರಳ ಸರಕಾರದ ಕುಟುಂಬ ಶ್ರೀ ಯೋಜನೆಯಡಿ ದ್ವಿಚಕ್ರ ವಾಹನದ ತರಬೇತಿಯನ್ನು ಪಡೆದ ಇವರು ಸ್ವಂತ ಗ್ಯಾರೇಜ್ ಅನ್ನು ಆರಂಭಿಸಿದ್ದಾರೆ.

ತಾವೇ ಸ್ಥಾಪಿಸಿರುವ ಈ ಗ್ಯಾರೇಜ್ ಬಗ್ಗೆ ಮಾತನಾಡಿದ ಬಿನ್ಸಿ ಇಂತಹದೊಂದು ಕನಸು ನಮ್ಮಲ್ಲಿತ್ತ್ತುಈ ಕನಸನ್ನು ಈಡೇರಿಸಿಕೊಂಡ ಬಗ್ಗೆ ನಮ್ಮಲ್ಲಿ ಹೆಮ್ಮೆ ಇದೆ. ಈ ಮೂಲಕ ಪುರುಷರಿಗಿಂತ ಕಮ್ಮಿಇಲ್ಲ ಎಂದು ತೋರಿಸಿದ್ದೇವೆ ಎಂದಿದ್ದಾರೆ.

- Advertisement -

Related news

error: Content is protected !!