Wednesday, June 17, 2026
spot_imgspot_img
spot_imgspot_img

ಬಂಟ್ವಾಳ : ಮದುವೆ ಮಂಟಪದಲ್ಲಿ ಬಾಲಕಿಯ ಚಿನ್ನದ ಸರ ಕಳವು

- Advertisement -
- Advertisement -

ಬಂಟ್ವಾಳ : ಮದುವೆಗೆಂದು ಬಂದ ಬಾಲಕಿಯೋರ್ವಳ ಕುತ್ತಿಗೆಯಲ್ಲಿದ್ದ ಬಂಗಾರದ ಚೈನ್ ಕಳೆದುಹೋದ ಘಟನೆ ಇಲ್ಲಿನ ಬಸ್ತಿಪಡ್ಪುವಿನಲ್ಲಿರುವ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದಿದೆ.

ನ.10 ರಂದು ನಡೆದ ಮದುವೆ ಕಾರ್ಯಕ್ರಮದಲ್ಲಿ ಮಗುವಿನ ಕುತ್ತಿಗೆಯಿಂದ ಬಂಗಾರದ ಚೈನ್ ಮಿಸ್ ಆಗಿದೆ. ಚೈನ್ ಕಳೆದುಕೊಂಡ ಬಾಲಕಿಯ ಹೆತ್ತವರು ಬಂಟ್ವಾಳ ‌ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಹಾಜರಾದ ಪೊಲೀಸರು ಆಗಮಿಸಿ ತನಿಖೆ ನಡೆಸಿದ್ದಾರೆ.

ಕಲ್ಯಾಣ ಮಂಟಪದ ಮ್ಯಾನೇಜರ್ ಬಳಿ ಸಿ‌ಸಿ‌ಕ್ಯಾಮರದ ಪೂಟೇಜ್‌ಗಾಗಿ ಕೇಳಿದಾಗ ಸಭಾಂಗಣದಲ್ಲಿ ಕ್ಯಾಮರಾ ಇಲ್ಲದಿರುವುದು ಬೆಳಕಿಗೆ ಬಂದಿದೆ. ಈ ವೇಳೆ ಮದುವೆಗೆ ಆಗಮಿಸಿದ ಬಾಲಕಿಯ ಸಂಬಂಧಿಕರು,ಪೋಷಕರು ಮತ್ತು ಮ್ಯಾನೇಜರ್ ನಡುವೆ ಕೆಲ ಹೊತ್ತು ಮಾತಿನ ಚಕಮಕಿ ಕೂಡ ನಡೆದಿದೆ ಎನ್ನಲಾಗಿದೆ.

ಬಂಗಾರ ಕಳೆದುಹೋಗಿದೆಯಾ? ಅಥವಾ ಕಳ್ಳರು ಕಳ್ಳತನ ಮಾಡಿದ್ದಾರಾ? ಎಂಬುದು ಇಲ್ಲಿ ಅಸ್ಪಷ್ಟವಾಗಿದೆ. ಈ ಘಟನೆಯ ಬಗ್ಗೆ ಕೂಲಂಕಷವಾಗಿ ತಿಳಿದುಕೊಳ್ಳಲು ಸಿ.ಸಿ.ಕ್ಯಾಮರಾ ಇಲ್ಲದಿರುವುದು ದೊಡ್ಡ ಸಮಸ್ಯೆಯಾಗಿದೆ ಎಂದು ಹೇಳಲಾಗಿದೆ.

- Advertisement -

Related news

error: Content is protected !!