Sunday, June 21, 2026
spot_imgspot_img
spot_imgspot_img

ಉಳ್ಳಾಲ: ಕಾರಿನ ಮೇಲೆ ಉರುಳಿ ಬಿದ್ದ ಬೃಹತ್ ಗಾತ್ರದ ಮರ

- Advertisement -
- Advertisement -

ಉಳ್ಳಾಲ: ನಿರಂತರ ಸುರಿಯುತ್ತಿರುವ ಧಾರಾಕಾರ ಮಳೆಗೆ ಮರವೊಂದು ಮುರಿದು ಕಾರಿನ ಮೇಲೆ ಉರುಳಿ ಬಿದ್ದ ಘಟನೆ ಸೋಮವಾರ ಮಧ್ಯಾಹ್ನ ಸೋಮೇಶ್ವರ ಪುರಸಭಾ ವ್ಯಾಪ್ತಿಯ ಪಿಲಾರುನಲ್ಲಿ ನಡೆದಿದೆ.

ಪಿಲಾರಿನಲ್ಲಿ ನೆಲೆಸಿರುವ ಆಶಿಶ್‌ ಎಂಬವರು ಕಾರನ್ನು ಮನೆಯ ಹೊರಗಡೆಯ ಪ್ರದೇಶದಲ್ಲಿ ನಿಲ್ಲಿಸಿ ಮನೆಯೊಳಗೆ ತೆರಳಿದ ತಕ್ಷಣವೇ ಗಾಳಿ, ಮಳೆಗೆ ಭಾರೀ ಗಾತ್ರದ ಮರವೊಂದು ಮುರಿದು ಕಾರಿನ ಮೇಲೆ ಉರುಳಿ ಬಿದ್ದಿದೆ. ಘಟನೆ ಸಂದರ್ಭ ಆಶಿಶ್ ಅವರು ಕಾರಿನ ಒಳಗಡೆ ಇರದ ಕಾರಣ ಅದೃಷ್ಟವಶಾತ್‌ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕಾರು ನಜ್ಜುಗುಜ್ಜಾಗಿದ್ದು ಸೋಮೇಶ್ವರ ಪುರಸಭಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Related news

error: Content is protected !!