Wednesday, May 1, 2024
spot_imgspot_img
spot_imgspot_img

ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಲಾರಿ; ಟ್ರಾಫಿಕ್‌ ಜಾಮ್‌

- Advertisement -G L Acharya panikkar
- Advertisement -

ಸಿಮೆಂಟ್‌ ಹೇರಿಕೊಂಡು ಹೋಗುತ್ತಿದ್ದ 16 ಚಕ್ರದ ಲಾಯಿಯೊಂದು ಚಾರ್ಮಾಡಿ ಘಾಟಿಯ ಹತ್ತನೇ ತಿರುವಿನಲ್ಲಿ ಕೆಟ್ಟು ನಿಂತ ಘಟನೆ ಚಾರ್ಮಾಡಿ ಘಾಟಿಯಲ್ಲಿ ನಡೆದಿದೆ.

ಹುಬ್ಬಳ್ಳಿಯಿಂದ ಮಂಗಳೂರಿಗೆ ಹೋಗುತ್ತಿದ್ದ ಸಿಮೆಂಟ್‌ ಲಾರಿ ಕೆಟ್ಟು ನಿಂತಿದ್ದು ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಈ ಮೂಲಕ ಕಿಲೋ ಮೀಟರ್‌ ಗಟ್ಟಲೆ ಟ್ರಾಫಿಕ್‌ ಜಾಮ್‌ ಆಗಿದೆ.

10 ಚಕ್ರದ ವಾಹನಕ್ಕಿಂತ ದೊಡ್ಡ ವಾಹನಗಳು ಚಾರ್ಮಾಡಿ ಘಾಟಿಯಲ್ಲಿ ಸಂಚರಿಸುವಂತಿಲ್ಲ. ಆದರೂ ಸವಾರ ಗೊತ್ತಿಲ್ಲದೇ ಬಂದಿದ್ದಾನೆ. ಈಗ ಹತ್ತನೇ ತಿರುವಿನಲ್ಲಿ ಹಿಂದೆಯೂ ಹೋಗದೆ, ಮುಂದೆಯೂ ಹೋಗದೆ ಸಿಲುಕಿಕೊಂಡಿದೆ. ಈ ಕಾರಣದಿಂದ ದಾರಿಯಲ್ಲಿ ಬರುತ್ತಿದ್ದ ಇತರ ವಾಹನ ತಿರುವಿನಲ್ಲಿ ಸಂಚರಿಸಲಾಗದೆ ಸಾಲು ಗಟ್ಟಿ ನಿಂತಿದೆ.

ಕೊಟ್ಟಿಗೆಹಾರ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರು ಇದ್ದರೂ ಲಾರಿಯನ್ನು ಬಿಟ್ಟಿದ್ದೇಗೆ ಎಂದು ಅಲ್ಲಿನ ಜನರ ಪ್ರಶ್ನೆ. ಸ್ಥಳೀಯರು ಪೊಲೀಸರು ವಿರುದ್ಧ ಅಸಮಾಧಾನಗೊಂಡಿದ್ದಾರೆ.

- Advertisement -

Related news

error: Content is protected !!