Friday, March 29, 2024
spot_imgspot_img
spot_imgspot_img

ಸಿದ್ದರಾಮಯ್ಯ ಸರಕಾರ ಇದ್ದಾಗ ರಮಾನಾಥ ರೈ ಉಸ್ತುವಾರಿ ಸಚಿವರಾಗಿದ್ದರು. ಆಗ ಜಿಲ್ಲೆಯಲ್ಲಿ ಡ್ರಗ್ಸ್ ಇರಲಿಲ್ಲವೇ..? -ನಳಿನ್ ಕುಮಾರ್

- Advertisement -G L Acharya panikkar
- Advertisement -

ಬೆಂಗಳೂರು: ಸಿದ್ದರಾಮಯ್ಯ ಸರಕಾರ ಇದ್ದಾಗ ರಮಾನಾಥ ರೈ ಉಸ್ತುವಾರಿ ಸಚಿವರಾಗಿದ್ದರು. ಆಗ ಜಿಲ್ಲೆಯಲ್ಲಿ ಡ್ರಗ್ಸ್ ಇರಲಿಲ್ಲವೇ..? ಅವರದೇ ಪಕ್ಷದ ಮೇಯರ್ ಮಗ ಡ್ರಗ್ ಮಾಫಿಯಾದಲ್ಲಿ ಇರಲಿಲ್ಲವೇ ? ಆಗ ಯಾಕೆ ಇವರು ತನಿಖೆ ಮಾಡಿರಲಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಪ್ರಶ್ನೆ ಮಾಡಿದ್ದಾರೆ.

ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ 70ನೇ ಹುಟ್ಟಿದ ಹಬ್ಬದ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ರನಾನಾಥ ರೈ ಜಿಲ್ಲೆಯ ಉಸ್ತುವಾರಿ ಮಂತ್ರಿ ಆಗಿದ್ದಾಗ ಜಿಲ್ಲೆಯಲ್ಲಿ ಕೊಲೆಗಳ ಸರಣಿಯೇ ನಡೆದಿತ್ತು. ಅಭಯಚಂದ್ರ ಜೈನ್, ಯು.ಟಿ. ಖಾದರ್ ಸಚಿವರಾಗಿದ್ದರು.

ಜೈಲಿನಲ್ಲಿ ಮರ್ಡರ್, ಅವರದೇ ಪಕ್ಷದ ಪಂಚಾಯತ್ ಅಧ್ಯಕ್ಷರ ಕೊಲೆ, ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ದೀಪಕ್ ರಾವ್, ಶರತ್ ಮಡಿವಾಳ ಕೊಲೆ, ಬಿ.ಸಿ.ರೋಡಿನ ಸೆಲೂನ್ನಲ್ಲಿ ಕೊಲೆ ಹೀಗೆ ಇವರ ಆಡಳಿತದಲ್ಲಿ ಕೊಲೆಗಳ ಸರಣಿಯೇ ಆಗಿತ್ತು. ಸಚಿವರಾಗಿದ್ದ ರಮಾನಾಥ ರೈ ಬಂಟರೇ ಸ್ಯಾಂಡ್ ಮಾಫಿಯಾದಲ್ಲಿ ತೊಡಗಿದ್ದರು. ರೈಗಳ ಆಪ್ತ ಜಿ.ಪಂ. ಸದಸ್ಯರ ನೇತೃತ್ವದಲ್ಲಿ ಮರಳು ಮಾಫಿಯಾ ಆಗ್ತಿತ್ತು. ಜಿಲ್ಲೆಯ ಎಲ್ಲ ಕಡೆ ಅಕ್ರಮ ಗಣಿಗಾರಿಕೆ ನಡೀತಿತ್ತು. ಯಾಕೆ ಅದನ್ನು ಕಂಟ್ರೋಲ್ ಮಾಡಕ್ಕಾಗಿಲ್ಲ ಎಂದು ನಳಿನ್ ಹೇಳಿದ್ದಾರೆ.

ರಮಾನಾಥ ರೈ, ಯುಟಿ ಖಾದರ್ ಸಚಿವರಾಗಿದ್ದಾಗ ಡ್ರಗ್ಸ್ ಇರಲಿಲ್ಲವೇ ? ಸಿದ್ದರಾಮಯ್ಯ ಸರಕಾರ ಇದ್ದಾಗ ರಾಜ್ಯದಲ್ಲಿ ಡ್ರಗ್ ಮಾಫಿಯಾ ಇರಲಿಲ್ಲವೇ ? ನಮ್ಮ ಸರಕಾರ ಮುಖ್ಯಮಂತ್ರಿಯವರ ಸೂಚನೆಯಂತೆ ಡ್ರಗ್ ಮಾಫಿಯಾ ವಿರುದ್ಧ ಕಾರ್ಯಾಚರಣೆ ನಡೆಸಲಾಗಿದೆ. ಬಿಜೆಪಿ ಸರಕಾರ ಬಂದ ಮೇಲೆ ದ.ಕ. ಜಿಲ್ಲೆಯಲ್ಲಿ ಕೊಲೆಗಳ ಸರಣಿ ನಿಂತು ಹೋಗಿದೆ. ಜಿಲ್ಲೆಯಲ್ಲಿ ಇರುವ ಎಲ್ಲ ಪಬ್ ಗಳನ್ನು ನಿಲ್ಲಿಸಲು ಪೊಲೀಸ್ ಕಮಿಷನರ್ ಗೆ ಹೇಳಿದ್ದೇವೆ. ಮುಂದಿನ ಅಕ್ಟೋಬರ್‌ ತಿಂಗಳಲ್ಲಿ ಹೊಯ್ಗೆ ನೀತಿ ಜಾರಿಗೆ ತರುತ್ತೇವೆ. ಪ್ರತಿ ಲೋಡ್ ಮರಳಿಗೆ ಎರಡು ಸಾವಿರಕ್ಕಿಂತ ಹೆಚ್ಚು ದರ ಪಡೆಯಲು ಅವಕಾಶ ನೀಡೋದಿಲ್ಲ ಎಂದು ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಜನ್ಮದಿನ ಹಿನ್ನೆಲೆಯಲ್ಲಿ ರಕ್ತದಾನ ಶಿಬಿರ ಆಯೋಜಿಸಿದ್ದು ನೂರಾರು ಮಂದಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ ಉಪಸ್ಥಿತರಿದ್ದರು.

- Advertisement -

Related news

error: Content is protected !!