Monday, June 22, 2026
spot_imgspot_img
spot_imgspot_img

ಬೈಕ್ ಗೆ ಲಾರಿ ಡಿಕ್ಕಿ; ಮೂವರು ಸಾವು..!

- Advertisement -
- Advertisement -

ಲಾರಿಯೊಂದು ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಮೂವರು ಸಾವನಪ್ಪಿದ್ದು ಮತ್ತೊಂದು ಮಗು ಗಂಭೀರವಾಗಿ ಗಾಯಗೊಂಡ ಘಟನೆ ಹಾವೇರಿಯ ಬ್ಯಾಡಗಿ ತಾಲೂಕಿನ‌ ಮೋಟೆಬೆನ್ನೂರು ಗ್ರಾಮದ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ನಡೆದಿದೆ.

ಮೃತಪಟ್ಟವರನ್ನು ಹಾವೇರಿಯ ನಾಗೇಂದ್ರನಮಟ್ಟಿ ನಿವಾಸಿಗಳಾದ ಆಸೀಫ್‌ವುಲ್ಲಾ ಮಲ್ಲಾಡದ (34) ಮತ್ತು ಅಫ್ರಿನ್‌ಬಾನು ಮಲ್ಲಾಡದ (27) ದಂಪತಿ ಹಾಗೂ ಇವರ 6 ವರ್ಷದ ಪುತ್ರ ಎಂದು ಗುರುತಿಸಲಾಗಿದೆ.

ಬೆಂಗಳೂರಿನಿಂದ ಹುಬ್ಬಳ್ಳಿ ಕಡೆಗೆ ಹೊರಟಿದ್ದ ಬೈಕ್‌ಗೆ ವೇಗವಾಗಿ ಬಂದ ಲಾರಿ ಡಿಕ್ಕಿಯಾಗಿ ಅವಘಡ ಸಂಭವಿಸಿದೆ. ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ತೀವ್ರವಾಗಿ ಗಾಯಗೊಂಡ ಹೆಣ್ಣುಮಗುವನ್ನು ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಗೆ ರವಾನಿಸಲಾಗಿದೆ. ಬ್ಯಾಡಗಿ ತಾಲ್ಲೂಕಿನ ಶಿಡೇನೂರಿನಿಂದ ಹಾವೇರಿ ನಗರಕ್ಕೆ ಬೈಕ್‌ನಲ್ಲಿ ಆಸೀಫ್‌ವುಲ್ಲಾ ಕುಟುಂಬದ ನಾಲ್ವರು ಮರಳಿ ಬರುವಾಗ ಈ ದುರ್ಘಟನೆ ಸಂಭವಿಸಿದೆ.

- Advertisement -

Related news

error: Content is protected !!