Friday, November 27, 2026
spot_imgspot_img
spot_imgspot_img

ಒತ್ತುವರಿ ವಿಚಾರಕ್ಕೆ ಗಲಾಟೆ – ಓರ್ವ ಕೊಲೆಯಲ್ಲಿ ಅಂತ್ಯ

- Advertisement -
- Advertisement -

ಬೆಂಗಳೂರು: ಒತ್ತುವರಿ ವಿಚಾರಕ್ಕೆ ಶುರುವಾದ ಗಲಾಟೆ ಓರ್ವ ಕೊಲೆಯಲ್ಲಿ ಅಂತ್ಯವಾಗಿದೆ. ಗುಂಡು ಹಾರಿಸಿ ಯುವಕನನ್ನ ಕೊಲೆ ಮಾಡಿರುವ ಘಟನೆ ಬೆಂಗಳೂರು ಹೊರವಯಲದ ಹೊಸಕೋಟೆ ಸಮೀಪದ ಸೋಲೂರಿನಲ್ಲಿ ನಡೆದಿದೆ.

ಲಿಖಿತ್ ಗೌಡ ( 25 ) ಕೊಲೆಯಾದ ಯುವಕ. ರಮೇಶ್ ಕೊಲೆಗೈದ ಆರೋಪಿ.

ಆಶ್ರಯ ಯೋಜನೆ ಜಮೀನು ಗುರುತು ಮಾಡುವ ಕಾರ್ಯ ನಡೆಸಲಾಗುತ್ತಿತ್ತು. ಈ ವೇಳೆ ಸರ್ಕಾರಿ ಜಾಮೀನಿನ ಸುಮಾರು 10 ಗುಂಟೆ ಜಾಗವನ್ನ ಆರೋಪಿ ರಮೇಶ್‌ ಒತ್ತುವರಿ ಮಾಡಿಕೊಂಡಿದ್ದ. ಹೀಗಾಗಿ ಒತ್ತುವರಿ ತೆರವಿಗೆ ಹೋಗಿದ್ದ ವೇಳೆ ರಮೇಶ್ ಮತ್ತು ಲಿಖಿತ್ ಗೌಡ ನಡುವೆ ಗಲಾಟೆ ನಡೆದಿದೆ. ಈ ವೇಳೆ ಲೈಸೆನ್ಡ್ ಗನ್ ನಿಂದ ರಮೇಶ್‌, ಲಿಖಿತ್ ಗೌಡ ಮೇಲೆ ಗುಂಡು ಹಾರಿಸಿದ್ದಾನೆ.

ಲಿಖಿತ್‌ ಗೌಡ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿದ ಹೊಸಕೋಟೆ ಪೊಲೀಸರು ಆರೋಪಿ ರಮೇಶ್‌ನನ್ನ ಬಂಧಿಸಿದ್ದಾರೆ.

- Advertisement -

Related news

error: Content is protected !!