Friday, June 27, 2025
spot_imgspot_img
spot_imgspot_img

ಮದುವೆ ನಿರಾಕರಿಸಿದ ಪ್ರಿಯಕರ.. ಮನನೊಂದು ಯುವತಿ ಆತ್ಮಹತ್ಯೆ

- Advertisement -
- Advertisement -
This image has an empty alt attribute; its file name is shri-energy-solar-667x1024.jpeg

ಪ್ರಿಯಕರ ಮದುವೆ ಆಗಲು ನಿರಾಕರಿಸಿದನೆಂದು ಯುವತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ನಗರ ಹೊರವಲಯದ ಯಲ್ಲಾಲಿಂಗ್ ಕಾಲೋನಿಯಲ್ಲಿ ನಡೆದಿದೆ.

ಆಳಂದ ತಾಲೂಕಿನ ಕೌಲಗಾ ಗ್ರಾಮದ ಪುಷ್ಪಾ (26) ಆತ್ಮಹತ್ಯೆ ಮಾಡಿಕೊಂಡ ಯುವತಿ.

ಪುಷ್ಪಾ ಯಲ್ಲಾಲಿಂಗ ಕಾಲೋನಿಯಲ್ಲಿ ಬಾಡಿಗೆ ರೂಂನಲ್ಲಿ ವಾಸವಾಗಿದ್ದಳು. UPSC ಪರೀಕ್ಷೆಗೆ ಸಿದ್ದತೆ ನಡೆಸುತ್ತಿದ್ದ ಪುಷ್ಪಾ ನಾಲ್ಕು ವರ್ಷಗಳಿಂದ ಗಾಂಧಿನಗರ ನಿವಾಸಿ ಕಿರಣ್ ಎಂಬಾತನನ್ನು ಇಷ್ಟಪಟ್ಟು ಪ್ರೀತಿ ಮಾಡುತ್ತಿದ್ದಳು. ಕೆಲ ದಿನಗಳಿಂದ ಪುಷ್ಪಾ ಮದುವೆ ಮಾಡಿಕೋ ಎಂದು ತನ್ನ ಪ್ರಿಯಕರ ಕಿರಣ್‌ಗೆ ಒತ್ತಾಯ ಮಾಡಿದ್ದಾಳೆ. ಆದರೆ ಅನ್ಯ ಜಾತಿ ಹಿನ್ನೆಲೆ ಕಿರಣ್​ ಮನೆಯವರು ಪುಷ್ಪಾಳನ್ನು ಮದುವೆಯಾಗಲು ನಿರಾಕರಿಸಿದ್ದಾರೆ.
ಇತ್ತ ಈಗಲೇ ಮದುವೆ ಬೇಡವೆಂದು ಕಿರಣ್ ಪುಷ್ಪಾಗೆ ಸಮಜಾಯಿಸಿದ್ದನು. ಇದರಿಂದ ಮನನೊಂದು ಪುಷ್ಪಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಲಾಗಿದೆ. ಈ ಪ್ರಕರಣ ಗುಲ್ಬರ್ಗಾ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

- Advertisement -

Related news

error: Content is protected !!