Monday, April 29, 2024
spot_imgspot_img
spot_imgspot_img

ಗೋಧಿ ಹಿಟ್ಟಿನ ಒಬ್ಬಟ್ಟು

- Advertisement -G L Acharya panikkar
- Advertisement -

ಇದನ್ನು ವಿಶಿಷ್ಟವಾಗಿ ಹಬ್ಬದ ಆಚರಣೆಗಳು ಮತ್ತು ಸಂದರ್ಭಗಳಲ್ಲಿ ಊಟದ ಭಾಗವಾಗಿ ತಯಾರಿಸಲಾಗುತ್ತದೆ ಮತ್ತು ಬಡಿಸಲಾಗುತ್ತದೆ.

ಗೋಧಿ ಹಿಟ್ಟಿನ ಒಬ್ಬಟ್ಟು ಮಾಡುವ ವಿಧಾನ
ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂಎಲ್ ) 2 ಕಪ್ ಗೋಧಿ ಹಿಟ್ಟು, ಉಪ್ಪು ರುಚಿಗೆ ತಕ್ಕಷ್ಟು ,6 ಟೇಬಲ್ ಚಮಚ ಅಡುಗೆ ಎಣ್ಣೆ

ಹೂರಣಕ್ಕೆ ಬೇಕಾಗುವ ಪದಾರ್ಥಗಳು: (ಅಳತೆ ಕಪ್ = 240 ಎಂಎಲ್ )
2 ಕಪ್ ತೆಂಗಿನ ತುರಿ, 1 ಕಪ್ ಪುಡಿಮಾಡಿದ ಬೆಲ್ಲ , 1 ಏಲಕ್ಕಿ

ಗೋಧಿ ಹಿಟ್ಟಿನ ಕಾಯಿ ಹೋಳಿಗೆ ಅಥವಾ ಕಾಯಿ ಒಬ್ಬಟ್ಟು ಮಾಡುವ ವಿಧಾನ:

  1. ಒಂದು ಪಾತ್ರೆಯಲ್ಲಿ ಗೋಧಿ ಹಿಟ್ಟು ಮತ್ತು ಉಪ್ಪು ಹಾಕಿ.
  2. ಸ್ವಲ್ಪ ಸ್ವಲ್ಪವೇ ನೀರು ಹಾಕುತ್ತಾ ಚಪಾತಿ ಹಿಟ್ಟಿಗಿಂತ ಸ್ವಲ್ಪ ಮೃದುವಾದ ಹಿಟ್ಟನ್ನು ಕಲಸಿ.
  3. ಮೇಲಿನಿಂದ ಎಣ್ಣೆ ಸುರಿದು, ಮುಚ್ಚಳ ಮುಚ್ಚಿ, 30 ನಿಮಿಷ ಪಕ್ಕಕ್ಕಿಡಿ.
  4. ಈಗ ಹೂರಣ ತಯಾರಿಸಲು, ತೆಂಗಿನ ತುರಿ, ಏಲಕ್ಕಿ ಮತ್ತು ಪುಡಿಮಾಡಿದ ಬೆಲ್ಲವನ್ನು ನೀರು ಹಾಕದೆ ನುಣ್ಣನೆ ಅರೆಯಿರಿ.
  5. ಅರೆದ ಮಿಶ್ರಣವನ್ನು ಬಾಣಲೆಗೆ ಹಾಕಿ, ಸ್ಟವ್ ಮೇಲಿಟ್ಟು ನೀರಿನಂಶ ಹೋಗುವವರೆಗೆ ಮಗುಚಿ.
  6. ಹೂರಣ ಬೆಚ್ಚಗಾದ ನಂತರ ಸಣ್ಣ ನಿಂಬೆ ಹಣ್ಣಿನ ಗಾತ್ರದ ಉಂಡೆ ಮಾಡಿಟ್ಟುಕೊಳ್ಳಿ. ಉಂಡೆ ಮೃದುವಾಗಿರಬೇಕು.
  7. ನಂತರ ಕೈಗೆ ಹಿಟ್ಟು ಮುಟ್ಟಿಸಿಕೊಂಡು ಒಂದು ನಿಂಬೆಗಾತ್ರದ ಹಿಟ್ಟು ತೆಗೆದುಕೊಂಡು ಬಟ್ಟಲಿನಾಕಾರ ಮಾಡಿ. ಹೂರಣ ಇಟ್ಟು, ಜಾಗ್ರತೆಯಿಂದ ಹೂರಣವನ್ನು ಒಳಗೆ ಸೇರಿಸಿ.
  8. ಬೇಕಾದಷ್ಟು ಹಿಟ್ಟು ಉದುರಿಸಿ, ತೆಳುವಾಗಿ ಲಟ್ಟಿಸಿ.
  9. ಕಾದ ಹಂಚಿನ ಮೇಲೆ ಹಾಕಿ ಎರಡು ಬದಿ ಕಾಯಿಸಿ. ರುಚಿ ರುಚಿಯಾದ ಗೋಧಿ ಹಿಟ್ಟಿನ ಹೋಳಿಗೆಯನ್ನು ತುಪ್ಪದೊಂದಿಗೆ ಸವಿಯಿರಿ.
- Advertisement -

Related news

error: Content is protected !!