Friday, June 5, 2026
spot_imgspot_img
spot_imgspot_img

ವಿಟ್ಲ: ಕಟ್ಟು ಹೊರುತ್ತಿದ್ದ ವ್ಯಕ್ತಿ ಕುಡಿದು ಬಿದ್ದು ಸ್ಥಳದಲ್ಲೇ ಸಾವು

- Advertisement -
- Advertisement -

ವಿಟ್ಲ: ಕಟ್ಟು ಹೊರುವ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವರು ಕುಡಿದು ಬಿದ್ದು ಸ್ಥಳದಲ್ಲೇ ಮೃತಪಟ್ಟ ಘಟನೆ ವಿಟ್ಲದ ಲೀಲಾವತಿ ಆರ್ಕೆಡ್‌ ಹಿಂಭಾಗದಲ್ಲಿ ನಡೆದಿದೆ.

ಮೃತರನ್ನು ಸಂತೋಷ್‌ (54) ಎಂದು ಗುರುತಿಸಲಾಗಿದೆ.

ವಿಟ್ಲದಲ್ಲಿ ಕಟ್ಟು ಹೊರುತ್ತಿದ್ದ ಸಂತೋಷ್‌ ಅನಾರೋಗ್ಯದಿಂದ ಬಳಲುತ್ತಿದ್ದು, ವಿಪರೀತ ಮದ್ಯಪಾನ ಮಾಡುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ವಿಟ್ಲದ ಲೀಲಾವತಿ ಆರ್ಕೆಡ್‌ ಹಿಂಭಾಗದಲ್ಲಿ ಕುಡಿದು ಬಿದ್ದು ಸಾವನ್ನಪ್ಪಿದ್ದು, ಇಂದು ಬೆಳಗ್ಗೆ ಸ್ಥಳೀಯರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಮೃತದೇಹವನ್ನು ವಿಟ್ಲ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ

- Advertisement -

Related news

error: Content is protected !!