Monday, June 15, 2026
spot_imgspot_img
spot_imgspot_img

ಕೇದಾರನಾಥ ಯಾತ್ರೆಗೆ ತೆರಳಿದ್ದ ಯುವಕ ಸಾವು

- Advertisement -
- Advertisement -

ಕೇದಾರನಾಥ ಯಾತ್ರೆಗೆ ತೆರಳಿದ್ದ ಚಿಕ್ಕಮಗಳೂರು ಮೂಲದ ಗಿರೀಶ್ ಸಾವನ್ನಪ್ಪಿದ್ದಾನೆ. ವಿಷಯದ ಬಗ್ಗೆ ಕೇದಾರನಾಥ ಪೊಲೀಸರು ಮೃತ ಯುವಕನ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.

ಕೇದಾರನಾಥದಲ್ಲಿ ಅಸ್ವಸ್ಥಗೊಂಡು ಸಾವನ್ನಪ್ಪಿರುವ ಗಿರೀಶ್  ಮೃತ ದೇಹವನ್ನು ರಿಷಿಕೇಶ್ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಇಡಲಾಗಿದೆ.
ಕರ್ನಾಟಕದಿಂದ ನೂರಾರು ಸಂಖ್ಯೆಯಲ್ಲಿ ಕೇದಾರನಾಥ ಯಾತ್ರೆಗೆ ತೆರಳಿದ್ದಾರೆ. ಅದರಂತೆ, ಕಳೆದ ವಾರ ಗಿರೀಶ್ ಅವರು ಕೂಡ ಮೂಡಿಗೆರೆಯಿಂದ ಯಾತ್ರೆ ಕೈಗೊಂಡಿದ್ದರು, ಆದರೆ ಅಲ್ಲಿ ಅಸ್ವಸ್ಥಗೊಂಡು ಗಿರೀಶ್ ಮೃತಪಟ್ಟಿದ್ದಾನೆ ಎಂದು ತಿಳಿದುಬಂದೆದೆ.

- Advertisement -

Related news

error: Content is protected !!