- Advertisement -
- Advertisement -




ಸುಳ್ಯ: ಬೈಕ್ ಮತ್ತು ರಿಕ್ಷಾ ಪರಸ್ಪರ ಡಿಕ್ಕಿಯಾಗಿ ಶಾಲಾ ವಿದ್ಯಾರ್ಥಿನಿಯ ಕಾಲಿಗೆ ಗಾಯವಾಗಿದ್ದು, ಕೋಪಗೊಂಡ ವಿದ್ಯಾರ್ಥಿನಿಯ ತಂದೆ ಆಟೋ ಚಾಲಕನಿಗೆ ಥಳಿಸಿದ ಘಟನೆ ಸುಳ್ಯ ನಗರದ ಜ್ಯೋತಿ ವೃತ್ತದ ಬಳಿ ನಡೆದಿದೆ.
ಪೆರಾಜೆಯ ಬೈಕ್ ಸವಾರ ಸುಳ್ಯದ ಖಾಸಗಿ ಶಾಲೆಯಿಂದ ತಮ್ಮ ಮಗಳನ್ನು ಕರೆ ತರುವ ವೇಳೆ ಜ್ಯೋತಿ ವೃತ್ತದ ಜಂಕ್ಷನ್ ಪಕ್ಕದಿಂದ ಬಂದ ಆಟೋ ರಿಕ್ಷಾ ಬೈಕಿಗೆ ತಾಗಿದ್ದು, ಈ ವೇಳೆ ರಿಕ್ಷಾ ತಾಗಿ ವಿದ್ಯಾರ್ಥಿನಿಯ ಪಾದಕ್ಕೆ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಈ ಸಂದರ್ಭ ವಿದ್ಯಾರ್ಥಿನಿಯ ತಂದೆ ಮತ್ತು ಆಟೋ ಚಾಲಕನ ನಡುವೆ ಮಾತಿಗೆ ಮಾತು ಬೆಳೆದು ಜಗಳ ಉಂಟಾಗಿ ಹೊಡೆದಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಹೊಡೆದಾಟದಲ್ಲಿ ಆಟೋ ಚಾಲಕನ ಮುಖಕ್ಕೆ ಗಾಯಗಳಾಗಿ ಅವರು ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಬೈಕ್ ಚಾಲಕನ ವಿರುದ್ಧ ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಗಾಯಾಳು ವಿದ್ಯಾರ್ಥಿನಿಯನ್ನು ಸುಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
- Advertisement -








