Monday, April 29, 2024
spot_imgspot_img
spot_imgspot_img

ಕುಂದಾಪುರ: ಕಡಲತೀರದಲ್ಲಿ ವ್ಯಕ್ತಿಯ ಶವ ಪತ್ತೆ

- Advertisement -G L Acharya panikkar
- Advertisement -

ಕುಂದಾಪುರ: ವಿದ್ಯಾರ್ಥಿಯೆಂದು ಶಂಕಿಸಲಾದ ವ್ಯಕ್ತಿಯೊಬ್ಬನ ಮೃತ ದೇಹ ಕೋಡಿ ಕಡಲ ತೀರದಲ್ಲಿ ಶನಿವಾರ ಬೆಳಿಗ್ಗೆ ಪತ್ತೆಯಾಗಿದೆ.

ಶನಿವಾರ ಬೆಳಿಗ್ಗೆ ಸ್ಥಳೀಯರು ಸಮುದ್ರ ತೀರಕ್ಕೆ ಬಂದಾಗ ಶವ ಪತ್ತೆಯಾಗಿದ್ದು, ಪ್ಯಾಂಟ್, ಬೆಲ್ಟ್ ಚಪ್ಪಲ್, ಆಧಾರ್ ಕಾರ್ಡ್, ಕಾಲೇಜು ಐಡೆಂಟಿಟಿ ಕಾರ್ಡ್, ಬಸ್ ಟಿಕೆಟ್ ಮೊದಲಾದ ದಾಖಲೆಗಳು ದೊರಕಿವೆ.

ಪ್ಯಾಂಟ್ ಜೇಬಿನಲ್ಲಿ ದಾಖಲೆಗಳು ದೊರಕಿವೆ. ಹೊಟ್ಟೆಯಲ್ಲಿ ನೀರು ತುಂಬಿರದ ಕಾರಣ ನೀರಿಗೆ ಬಿದ್ದು ಸಾವನ್ನಪ್ಪಿರುವ ಸಾಧ್ಯತೆಗಳು ಇಲ್ಲ ಎನ್ನಲಾಗಿದೆ.

ಶುಕ್ರವಾರ ಮಧ್ಯಾಹ್ನ ಮಳವಳ್ಳಿಯಿಂದ ಮೈಸೂರಿಗೆ ಸರ್ಕಾರಿ ಬಸ್ಸಿನಲ್ಲಿ ಪ್ರಯಾಣಿಸಿದ ಟಿಕೆಟ್ ಪತ್ತೆಯಾಗಿದೆ. ಸ್ಥಳದಲ್ಲಿ ದೊರಕಿದ ದಾಖಲೆಗಳು ಮೃತ ವ್ಯಕ್ತಿಯದ್ದೇ ಅಲ್ಲವೇ? ಎಂಬುದನ್ನು ಕುಂದಾಪುರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

- Advertisement -

Related news

error: Content is protected !!