Friday, June 19, 2026
spot_imgspot_img
spot_imgspot_img

ಕಡಬ: ಆಸ್ಪತ್ರೆಗೆಂದು ತೆರಳಿದ್ದ ವಿವಾಹಿತ ಮಹಿಳೆ ನಾಪತ್ತೆ

- Advertisement -
- Advertisement -

ಕಡಬ: ಡೆಂಟಲ್‌ ಕ್ಲಿನಿಕ್‌ಗೆಂದು ಸುಬ್ರಹ್ಮಣ್ಯದ ಆಸ್ಪತ್ರೆಯೊಂದಕ್ಕೆ ತೆರಳಿದ್ದ ವಿವಾಹಿತ ಮಹಿಳೆ ಕಾಣೆಯಾದ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಮಹಿಳೆ ತಂದೆ ದೂರು ದಾಖಲಿಸಿದ್ದಾರೆ.

ಬಿಳಿನೆಲೆ ಗ್ರಾಮದ ದೇವಸ್ಯ ಮನೆ ಮಾಯಿಲಪ್ಪ ಗೌಡ ಅವರ ಪುತ್ರಿ ತೀರ್ಥಲತಾ ಕಾಣೆಯಾದ ಮಹಿಳೆ.

ಮಗಳನ್ನು ಗದಗ ಮೂಲದ ಮುಂಡರಗಿಯ ಶಿವರಾಜ್ ಎಂಬಾತನೊಂದಿಗೆ ವಿವಾಹ ಮಾಡಿಕೊಡಲಾಗಿತ್ತು. ತಂದೆ ಮನೆಗೆ ಬಂದಿದ್ದ ಆಕೆ ಸುಬ್ರಹ್ಮಣ್ಯದಲ್ಲಿರುವ ಆಸ್ಪತ್ರೆಯೊಂದಕ್ಕೆ ಹಲ್ಲಿನ ಚಿಕಿತ್ಸೆಗಾಗಿ ತೆರಳಿ ಬಳಿಕ ಮನೆಗೆ ಬಂದಿಲ್ಲವೆಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸರು ದೂರು ದಾಖಲಿಸಿಕೊಂಡು ಸಾರ್ವಜನಿಕ ಪ್ರಕಟನೆ ಹೊರಡಿಸಿ ಮಾಹಿತಿ ಸಿಕ್ಕಲ್ಲಿ ಠಾಣೆಗೆ ತಿಳಿಸುವಂತೆ ಕೋರಿದ್ದಾರೆ.

Insta: glacharyajewellers
Fb: glacharya
- Advertisement -

Related news

error: Content is protected !!