Friday, November 13, 2026
spot_imgspot_img
spot_imgspot_img

ಬಿಜೆಪಿ ಮಾಣಿಲ ಶಕ್ತಿಕೇಂದ್ರದ ವತಿಯಿಂದ “ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ” ಬೃಹತ್ ಪಾದಯಾತ್ರೆ ಹಾಗೂ ಪ್ರತಿಭಟನಾ ಸಭೆ

- Advertisement -
- Advertisement -

'ರಿಯಾಲಿಟಿ ಇಲ್ಲದ ಟೂರಿಂಗ್ ಟಾಕೀಸ್ ಸರಕಾರವು ಅಭಿವೃದ್ಧಿಯ ಸಿನೆಮಾ ತೋರಿಸ್ತಾ ಜನರನ್ನು ವಂಚಿಸುತ್ತಿದ್ದಾರೆ.' - ಆರ್ ಸಿ ನಾರಾಯಣ ರೆಂಜ ಲೇವಡಿ

ಮಾಣಿಲ: ರಾಜ್ಯ ಸರ್ಕಾರ ಹಾಲು ಮೊಸರು, ಬಸ್ ದರ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ಜನತೆಯ ಬದುಕಿನ ಜತೆಗೆ ಚೆಲ್ಲಾಟವಾಡುತ್ತಿದೆ. ಅಭಿವೃದ್ಧಿ ಕಾರ್ಯಗಳಿಗೆ ಹಣ ಇಲ್ಲ ಎಂದು ಒಪ್ಪಿಕೊಂಡಿರುವ ರಾಜ್ಯದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಿಯಾಲಿಟಿ ಇಲ್ಲದ ಟೂರಿಂಗ್ ಟಾಕೀಸ್ ಸರಕಾರವು ಅಭಿವೃದ್ಧಿಯ ಸಿನೆಮಾ ತೋರಿಸ್ತಾ ಜನರನ್ನು ವಂಚಿಸಿತ್ತಿದ್ದಾರೆ ಎಂದು ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ಆರ್.ಸಿ. ನಾರಾಯಣ ರೆಂಜ ವ್ಯಂಗ್ಯವಾಡಿದ್ದಾರೆ.

ಅವರು ಗುರುವಾರ(ನ.12) ಭಾರತೀಯ ಜನತಾ ಪಾರ್ಟಿ ಮಾಣಿಲ ಶಕ್ತಿಕೇಂದ್ರದ ವತಿಯಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ‘ನಮ್ಮ ಹಕ್ಕಿಗಾಗಿ ನಮ್ಮ ಹೆಜ್ಜೆ’ ಪಾದಯಾತ್ರೆ ಹಾಗೂ ‘ನಮ್ಮ ಹಕ್ಕು ನಮಗೆ ನೀಡಿ’ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು.

ಸ್ಥಳೀಯ ಪಂಚಾಯತ್ ಮಟ್ಟದಲ್ಲಿ ಕನಿಷ್ಠ ಸೌಲಭ್ಯ ದೊರಕದೆ ಸಾರ್ವಜನಿಕರು ಕಂಗಲಾಗಿದ್ದಾರೆ. ಸರಕಾರ ಲಂಚ, ಭ್ರಷ್ಟಾಚಾರದಲ್ಲಿ ಮುಳುಗಿದೆ. ಅಮಾಯಕರ ವಿರುದ್ಧ ಸುಳ್ಳು ಕೇಸು ಹಾಕಿ ಹಿಂಸೆ, ವೈಭವೀಕರಣ ಮಾಡಲಾಗುತ್ತಿದೆ. ಚುನಾವಣೆ ನಡೆಸಲೂ ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ಈ ಸರಕಾರ ತೊಲಗದೇ ಇದ್ದಲ್ಲಿ ಮುಂದೆ ಜನರ ಬದುಕು ಹೀನಾಯ ಸ್ಥಿತಿಗೆ ಬರಲಿದೆ. ಆದ್ದರಿಂದ ಜನರು ಎಚ್ಚರಿಕೆ ವಹಿಸುವುದು ಮುಖ್ಯ. ರೈತರ, ಬಡವರ, ಮಹಿಳೆಯರ ಪರವಾಗಿ ಬಿಜೆಪಿ ರಾಜ್ಯದಲ್ಲೆಡೆ ಪ್ರತಿಭಟನೆ ನಡೆಸುತ್ತಿದೆ. ಕರ್ನಾಟಕದಲ್ಲಿ ಮುಂದೆ ಬಿಜೆಪಿ ಸರಕಾರ ಬರಲಿದೆ. ಸ್ವಚ್ಛ ರಾಜಕಾರಣ ನಡೆಯಲಿದೆ ಎಂದು ಅವರು ಹೇಳಿದರು.

ಪುಣಚ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ರಾಜೇಶ್ ಬಾಳೆಕಲ್ಲು, ಶಕ್ತಿಕೇಂದ್ರ ಅಧ್ಯಕ್ಷರಾದ ಗೀತಾನಂದ ಶೆಟ್ಟಿ ಸಭೆಯಲ್ಲಿ ಮಾತನಾಡಿದರು.

ಪ್ರತಿಭಟನಾ ಸಭೆಯಲ್ಲಿ ಪುತ್ತೂರು ಬಿಜೆಪಿ ಉಪಾಧ್ಯಕ್ಷರಾದ ಹರಿಪ್ರಸಾದ್ ಯಾದವ್, ಶ್ರವಣ್ ಭಟ್, ಬಾಲಕೃಷ್ಣ ರೈ, ಚಂದ್ರಶೇಖರ ಪಕಳಕುಂಜ, ಉದಯ ಸಾಯ, ಮಹೇಶ್ ಭಟ್, ಉದಯ ಕೆರೆಮೂಲೆ, ಬಾಲಕೃಷ್ಣ ಪೂಜಾರಿ ಪೆರುವಾಯಿ, ಸದಾನಂದ ಶೆಟ್ಟಿ, ಕುಶಾಲಪ್ಪ, ಗೀತಾ, ಸುಜಾತಾ, ಉಷಾ ರಾಮಣ್ಣ ನಾಯಕ್, ಚನಿಯಪ್ಪ ಸುರಂಪಲ್ಲ, ರೋಹಿತ್ ದಾಸ್, ರಮೇಶ್ ರೂಪಾಯಿಮೂಲೆ, ಶೇಖರ್ ಪೂಜಾರಿ ಸೇರಿದಂತೆ ಹಲವರು ಗ್ರಾಮಸ್ಥರು ಭಾಗವಹಿಸಿದ್ದರು.

ಪ್ರತಿಭಟನೆ ಬಳಿಕ ಸರಕಾರಕ್ಕೆ ಅಗ್ರಹ ಪತ್ರವನ್ನು ಪಂಚಾಯತ್ ಅಧಿಕಾರಿಗಳಿಗೆ ನೀಡಲಾಯಿತು.

ಸೂರಜ್ ರೈ ವಂದಿಸಿದರು. ನಳಿನಾಕ್ಷಿ ವಂದೇ ಮಾತರಂ ಹಾಡಿದರು.

- Advertisement -

Related news

error: Content is protected !!