- Advertisement -
- Advertisement -





ಬೆಂಗಳೂರು: ಒಂದೇ ದಿನ 10.73 ಲಕ್ಷ ಜನ ಮೆಟ್ರೋದಲ್ಲಿ ಪ್ರಯಾಣಿಸುವ ಮೂಲಕ 15 ವರ್ಷಗಳ `ನಮ್ಮ ಮೆಟ್ರೋ’ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ.
ಮಾ.18ರಂದು ಯುಗಾದಿ ಹಿಂದಿನ ದಿನ ನಮ್ಮ ಮೆಟ್ರೋದಲ್ಲಿ 10.73 ಲಕ್ಷ ಜನರು ಸಂಚರಿಸಿದ್ದು, ಈ ಮೂಲಕ 15 ವರ್ಷಗಳ ನಮ್ಮ ಮೆಟ್ರೋ ಇತಿಹಾಸದಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ.
ನಾಲ್ಕು ದಿನ ನಿರಂತರ ರಜೆಯಿದ್ದ ಹಿನ್ನೆಲೆ 10 ಲಕ್ಷಕ್ಕೂ ಹೆಚ್ಚು ಜನರು ಮೆಟ್ರೋದಲ್ಲಿ ಪ್ರಯಾಣಿಸಿದ್ದು, ಈ ಪೈಕಿ 4 ಲಕ್ಷಕ್ಕೂ ಹೆಚ್ಚು ಜನರು ಸ್ಮಾರ್ಟ್‌ಕಾರ್ಡ್ ಬಳಕೆ ಮಾಡಿದ್ದಾರೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ.
- Advertisement -








