Wednesday, May 1, 2024
spot_imgspot_img
spot_imgspot_img

ಹಳೆಯ ಬಸ್ಸುಗಳಿಗೆ ಹೊಸ ಟಚ್ ಕೊಡಲಿರುವ ಕೆಎಸ್‌ಆರ್‌ಟಿಸಿ

- Advertisement -G L Acharya panikkar
- Advertisement -

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ರಾಜ್ಯದ ಎಲ್ಲ ವಿಭಾಗೀಯ ಡಿಪೋ ಮತ್ತು ಪ್ರಾದೇಶಿಕ ಕಾರ್ಯಾಗಾರಗಳಲ್ಲಿ ಹಳೆಯ ಬಸ್‌ಗಳನ್ನು ನವೀಕರಿಸಲು ಪ್ರಾರಂಭಿಸಿದೆ.

ಹೊಸ ಬಸ್​​ಗಳನ್ನು ಕೊಂಡುಕೊಳ್ಳಲು ಹೆಚ್ಚು ಹಣ ಬೇಕಾಗುತ್ತದೆ. ಆದರೆ ಕೊರೊನಾದಿಂದ ಕೆಎಸ್​ಆರ್​ಟಿಸಿಗೆ ಸಾಕಷ್ಟು ನಷ್ಟದಲ್ಲಿದ್ದು ಇದನ್ನು ಸರಿದೂಗಿಸಲು ಹಳೇ ಬಸ್​​ಗಳನ್ನೇ ರಿಪೇರಿ ಮಾಡಿ, ರಸ್ತೆಗೆ ಇಳಿಸಲು ಕೆಎಸ್​ಆರ್​ಟಿಸಿ ಮುಂದಾಗಿದೆ.

ಈ ಬಗ್ಗೆ ಕೆಎಸ್‌ಆರ್‌ಟಿಸಿಯ ವ್ಯವಸ್ಥಾಪಕ ನಿರ್ದೇಶಕ ವಿ ಅನ್ಬುಕುಮಾರ್ ಮಾತನಾಡಿ ಹೊಸ ಬಸ್‌ಗಳನ್ನು ಖರೀದಿಸುವ ಬದಲು ಹಳೆಯ ಬಸ್‌ಗಳನ್ನು ನವೀಕರಿಸುವ ಕೆಲಸವನ್ನು ಪ್ರಾರಂಭಿಸಿದ್ದೇವೆ. ಹೊಸ ಬಸ್‌ಗೆ ಸುಮಾರು 40 ಲಕ್ಷ ರೂಪಾಯಿ ವೆಚ್ಚವಾಗಲಿದೆ. ಆದರೆ ಇದೀಗ ಬಹುತೇಕ ಸ್ಕ್ರ್ಯಾಪ್ ಆಗಿರುವ ಹಳೇ ಬಸ್‌ಗಳನ್ನೇ ನವೀಕರಿಸಿ ರಸ್ತೆಗೆ ಇಳಿಸಲು ನಿರ್ಧರಿಸಿದ್ದು, ಇದಕ್ಕೆ ಸುಮಾರು 3 ಲಕ್ಷ ರೂಪಾಯಿ ವೆಚ್ಚವಾಗಲಿದೆ ಎಂದು ತಿಳಿಸಿದರು.

ಕೆಎಸ್‌ಆರ್‌ಟಿಸಿಯ 8,100 ಬಸ್‌ಗಳು ತಲಾ 10 ಲಕ್ಷ ಕಿಮೀಕ್ಕಿಂತ ಹೆಚ್ಚು ಸಂಚರಿಸಿದ ನಂತರ ನಿಂತಿವೆ. ಹೀಗೆ ನಿಂತ ನಿಗಮದ ಸುಮಾರು 1,000 ಬಸ್‌ಗಳನ್ನು ನವಿಕರಿಸಲಾಗುತ್ತಿದ್ದು, ಕಳೆದ ಜುಲೈ-ಆಗಸ್ಟ್‌ನಲ್ಲಿ ಕೆಲಸವನ್ನು ಪ್ರಾರಂಭಿಸಲಾಗಿದೆ. ಅಂದಿನಿಂದ ಇಲ್ಲಿಯವರೆಗೆ 494 ಬಸ್‌ಗಳನ್ನು ಯಶಸ್ವಿಯಾಗಿ ನವೀಕರಿಸಲಾಗಿದೆ ಎಂದರು.

- Advertisement -

Related news

error: Content is protected !!