Monday, June 8, 2026
spot_imgspot_img
spot_imgspot_img

ಪುತ್ತೂರು: ಆಟೋ ರಿಕ್ಷಾ, ಟಿಪ್ಪರ್ ನಡುವೆ ಅಪಘಾತ : ದಂಪತಿ, ಮಕ್ಕಳಿಗೆ ಗಾಯ

- Advertisement -
- Advertisement -
This image has an empty alt attribute; its file name is VC_PUC_-1-819x1024.jpg

ಪುತ್ತೂರು: ಟಿಪ್ಪರ್ ಲಾರಿಯೊಂದು ಆಟೋರಿಕ್ಷಾಗೆ ಹಿಂದಿನಿಂದ ಡಿಕ್ಕಿಯಾಗಿ ರಿಕ್ಷಾದಲ್ಲಿದ್ದ ದಂಪತಿ ಸಹಿತ ಮಕ್ಕಳಿಬ್ಬರು ಗಾಯಗೊಂಡಿರುವ ಘಟನೆ ನೆಕ್ಕಿಲಾಡಿ ಎಂಬಲ್ಲಿ ನಡೆದಿದೆ.

ಟಿಪ್ಪರ್ ಲಾರಿ ಚಾಲಕ ಲಾರಿ ಚಾಲಕ ಸುಚಿತ್ ಕುಮಾರ್ ಎಂಬವರು ಅಜಾಗರೂಕತೆಯ ಚಾಲನೆಯಿಂದ ಮುಂದೆ ಹೋಗುತ್ತಿದ್ದ ಆಟೋ ರಿಕ್ಷಾಗೆ ಡಿಕ್ಕಿ ಹೊಡೆದು ಆಟೋ ರಿಕ್ಷಾ ಪಲ್ಟಿಯಾಗಿದ್ದು, ದಂಪತಿ ಸಹಿತ ಇಬ್ಬರು ಮಕ್ಕಳು ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಆಟೋ ಚಾಲಕ ಕೃಷ್ಣಪ್ಪ, ಪತ್ನಿ ಭಾರತಿ ಹಾಗೂ ಮಗಳು ಆಕರ್ಷಣಿ (14) ಮಗ ಮಿಥುನ್ (9) ಗಾಯಗೊಂಡವರು.

ಗಾಯಾಳುಗಳನ್ನು ಪುತ್ತೂರು ಆದರ್ಶ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು,ಈ ಕುರಿತು ಟಿಪ್ಪರ್ ಚಾಲಕ ಸುಚಿತ್ ಕುಮಾರ್ ವಿರುದ್ಧ ಪುತ್ತೂರು ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!