Sunday, June 14, 2026
spot_imgspot_img
spot_imgspot_img

ಉಡುಪಿ: ಚಲಿಸುತ್ತಿರುವ ರೈಲಿನಿಂದ ಆಯತಪ್ಪಿ ಬಿದ್ದ ಪ್ರಯಾಣಿಕ ಗಂಭೀರ

- Advertisement -
- Advertisement -

ಉಡುಪಿ: ಪ್ರಯಾಣಿಕನೋರ್ವ ಚಲಿಸುತ್ತಿರುವ ರೈಲಿನಿಂದ ಆಯಾತಪ್ಪಿ ಬಿದ್ದು, ಗಂಭೀರ ಗಾಯಗೊಂಡ ಘಟನೆ ಸೋಮವಾರ ರಾತ್ರಿ ನಡೆದಿದೆ

ಗಂಭೀರ ಗಾಯಗೊಳಗಾದ ಪ್ರಯಾಣಿಕನನ್ನು ಸಮಾಜಸೇವಕ ನಿತ್ಯಾನಂದ ಒಳಕಾಡುವರು ಅಜ್ಜರಕಾಡಿನ ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದ್ದಾರೆ.

ಗಾಯಾಳು.ವನ್ನು ಮದ್ಯಪ್ರದೇಶದ ನಿವಾಸಿ ರಾಮಪಾಲ್ (44) ಎಂದು ಗುರುತಿಸಲಾಗಿದೆ.

ರಾಮಪಾಲ್ ಅವರು ಸುರತ್ಕಲಿಗೆ ಉದ್ಯೋಗ ನಿಮಿತ್ತ ಬಂದಿದ್ದರು ಎಂದು ತಿಳಿದುಬಂದಿದೆ. ರೈಲು ನಿಲುಗಡೆಗಾಗಿ ಇಂದ್ರಾಳಿಯ ರೈಲು ನಿಲ್ದಾಣಕ್ಕೆ ನಿಧಾನಗತಿಯಲ್ಲಿ ರೈಲು ಸೇತುವೆ ಬಳಿ ಬರುತ್ತಿದ್ದಂತೆ, ಬಾಗಿಲಬಳಿ ನಿಂತಿದ್ದ ರಾಮಪಾಲ್ ಅವರು ಹೊರಕ್ಕೆ ಎಸೆಯಲ್ಪಟ್ಟಿದ್ದಾರೆ. ರೈಲು ನಿಧಾನಗತಿಯಲ್ಲಿದ್ದರಿಂದ ರಾಮಪಾಲ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ

- Advertisement -

Related news

error: Content is protected !!