Saturday, June 13, 2026
spot_imgspot_img
spot_imgspot_img

ಬಂಟ್ವಾಳ: ವಿಷ ಜಂತು ಕಡಿದು ವ್ಯಕ್ತಿ ಮೃತ್ಯು

- Advertisement -
- Advertisement -

ಬಂಟ್ವಾಳ: ತೋಟದಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೋರ್ವರಿಗೆ ವಿಷ ಜಂತು ಕಡಿದು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಸಜೀಪಮೂಡ ಗ್ರಾಮದ ನಗ್ರಿಯಲ್ಲಿ ನಡೆದಿದೆ.

ನಗ್ರಿ ನಿವಾಸಿ ಅಂದ್ರು ಡಿ’ಸೋಜಾ (60) ಅವರು ಕೆಲಸ ಮಾಡುತ್ತಿದ್ದ ವೇಳೆ ಯಾವುದೋ ವಿಷಜಂತು ಕಡಿದಿದೆ. ಪ್ರಾರಂಭದಲ್ಲಿ ಅದಕ್ಕೆ ಹಳ್ಳಿ ಮದ್ದು ಮಾಡಲಾಗಿದ್ದು, ಅದು ಉಲ್ಬಣಗೊಂಡಿತ್ತು. ಗುಣವಾಗದೆ ಉಲ್ಬಣಗೊಂಡಿತ್ತು, ಹೀಗಾಗಿ ಅವರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!