ಮೈಸೂರು: ಸಾಲಗಾರರ ಕಿರುಕುಳಕ್ಕೆ ಬೇಸತ್ತು ಡೆತ್‌ನೋಟ್ ಬರೆದು ನಾಪತ್ತೆಯಾಗಿದ್ದ ಆಟೋ ಡ್ರೈವರ್ ಶವವಾಗಿ ಪತ್ತೆಯಾಗಿದ ಘಟನೆ ಹುಣಸೂರು ತಾಲೂಕಿನ ಕುಟ್ಟುವಾಡಿ ಗ್ರಾಮದಲ್ಲಿ ಘಟನೆ ನಡೆದಿದೆ.
ಮೃತಪಟ್ಟ ವ್ಯಕ್ತಿ ಆಟೋ ಡ್ರೈವರ್ ಪ್ರಸಾದ್ (40) ಎಂದು ಗುರುತಿಸಲಾಗಿದೆ.
ಕಳೆದ ಜುಲೈ 20 ರಂದು ಕಟ್ಟುವಾಡಿಯಿಂದ ಪ್ರಸಾದ್ ಕಾಣೆಯಾಗಿದ್ದರು. ಎಚ್.ಡಿ.ಕೋಟೆಯ ಸರಗೂರಿನ ಕಪಿಲಾ ನದಿ ದಂಡೆ ಸೋಮೇಶ್ವರ ದೇವಸ್ಥಾನದ ಬಳಿ ನೀರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಪ್ರಸಾದ್ ಡೆತ್‌ನೋಟ್ ಆಟೋದಲ್ಲಿ ಇಟ್ಟು ನಾಪತ್ತೆಯಾಗಿದ್ದರು. ಪ್ರಸಾದ್ ನಾಪತ್ತೆಯಿಂದಾಗಿ ಕುಟುಂಬಸ್ಥರು ಕಂಗಾಲಾಗಿದ್ದರು. ಈ ಸಂಬಂಧ ಬಿಳಿಕೆರೆ ಪೊಲೀಸರು ಮಿಸ್ಸಿಂಗ್ ಕೇಸ್ ದಾಖಲಾಗಿದ್ದು, ಪ್ರಸಾದ್‌ಗಾಗಿ ಶೋಧ ನಡೆಸುತ್ತಿದ್ದರು. ಡೆತ್‌ನೋಟ್‌ನಲ್ಲಿ ನನ್ನ ಸಾವಿಗೆ ಫೈನಾನ್ಸ್ ಮಧು, ಟೆಂಪೋ ಕಿರಣ್ ಕಾರಣ ಎಂದು ಉಲ್ಲೇಖಿಸಿದ್ದರು.
ಫೈನಾನ್ಸ್ ಮಧು ಬಳಿ ಕಿರಣ್ ಜಾಮೀನು ನೀಡಿ ಹಣ ಸಾಲ ಕೊಡಿಸಿದ್ದ.ನಿಗದಿತ ಸಮಯಕ್ಕೆ ಹಣ ಹಿಂದಿರುಗಿಸಿಲ್ಲ. ಹೀಗಾಗಿ ಕಿರಣ್ ಆಗಾಗ್ಗೆ ಮನೆಗೆ ಬಂದು ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ಪ್ರಸಾದ್ ಡೆತ್ ನೋಟ್ ಬರೆದು ನಾಪತ್ತೆಯಾಗಿದ್ದ.
ಎಚ್.ಡಿ.ಕೋಟೆ ಸರಗೂರಿನಲ್ಲಿ ಪ್ರಸಾದ್ ಮೃತದೇಹ ದೊರೆತಿದೆ. ಸರಗೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.