Saturday, June 28, 2025
spot_imgspot_img
spot_imgspot_img

ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಬಂದ ಪ್ರಯಾಣಿಕನ ಬ್ಯಾಗ್‌ನಲ್ಲಿದ್ದ ಹೆಬ್ಬಾವು, ಉಡ, ಮೊಸಳೆ ಇನ್ನಿತರ ಪ್ರಾಣಿಗಳು ವಶ.

- Advertisement -
- Advertisement -
vtv vitla

ಬೆಂಗಳೂರು : ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಪ್ರಯಾಣಿಕನೋವ೯ನ ಮೇಲೆ ಅನುಮಾನಗೊಂಡು ತಪಾಸಣೆ ಸಂಧಭ೯ದಲ್ಲಿ 234 ಪ್ರಾಣಿಗಳು ಬ್ಯಾಗ್‌ನಲ್ಲಿ ಪತ್ತೆಯಾದ ಘಟನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಆರೋಪಿಯು ತಮಿಳುನಾಡು ಮೂಲದವನಾಗಿದ್ದು, ಬ್ಯಾಂಕಾಕ್‌ನಿಂದ ’ಎಫ್‌ಡಿ 137′ ವಿಮಾನದಲ್ಲಿ ಬೆಂಗಳೂರಿಗೆ ಬಂದ ಆರೋಪಿಯು ತನ್ನ ಬ್ಯಾಗನ್ನು ಮರೆಮಾಚಿ ಸಾಗಿಸುತ್ತಿದ್ದ . ಈ ವೇಳೆ ಅನುಮಾನಗೊಂಡ ಅಧಿಕಾರಿಗಳು ತಪಾಸಣೆ ನಡೆಸಿದಾಗ ಆರೋಪಿಯು ಪ್ರಾಣಿಗಳನ್ನು ಬಾಕ್ಸ್‌ಗಳಲ್ಲಿ ತುಂಬಿಸಿಕೊಂಡು ಬ್ಯಾಗ್‌ನಲ್ಲಿ ಇಟ್ಟುಕೊಂಡಿದ್ದು ಪತ್ತೆಯಾಗಿದೆ.
ಕಸ್ಟಮ್ಸ್ ಅಧಿಕಾರಿಗಳು ಪ್ರಾಣಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ವಶಕ್ಕೆ ನೀಡಿದ್ದಾರೆ. ಹೆಚ್ಚಿನ ವಿಚಾರಣೆಗೆ ಆರೋಪಿಯನ್ನು ಕಸ್ಟಮ್ಸ್ ಕಾಯ್ದೆಯ ಸೆಕ್ಷನ್
104ರ ಅಡಿಯಲ್ಲಿ ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.

- Advertisement -

Related news

error: Content is protected !!