Friday, June 19, 2026
spot_imgspot_img
spot_imgspot_img

ಅಪರೂಪದ ಬಿಳಿ ಬಣ್ಣದ ನಾಗರ ಹಾವು ಪತ್ತೆ..!!

- Advertisement -
- Advertisement -
vtv vitla

ಅಪರೂಪಕ್ಕೆ ಕಾಣಸಿಗುವ ಶ್ವೇತ ಬಣ್ಣದ ನಾಗರ ಹಾವೊಂದು ಕೋಲಾರದಲ್ಲಿ ಪತ್ತೆಯಾಗಿದೆ.

ಕೋಲಾರದ ಮುನೇಶ್ವರ ನಗರದ ರವೀಂದ್ರ ಮನೆಯಲ್ಲಿ 6 ಅಡಿ ಉದ್ಧದ ಬಿಳಿ ಬಣ್ಣದ ನಾಗರಹಾವು ಕಾಣಿಸಿಕೊಂಡಿತ್ತು. ಅಪರೂಪದ‌ ಬಿಳಿನಾಗರ ಹಾವನ್ನು ನೋಡಲು ಮನೆಗೆ ಜನ ಮುಗಿಬಿದ್ದಿದ್ದರು. ಕೂಡಲೇ ಸ್ಥಳಕ್ಕೆ ಆಗಮಿಸಿದ ಉರಗರಕ್ಷಕ ರವಿ ನಾಗರವನ್ನು ಸುರಕ್ಷಿತವಾಗಿ ರಕ್ಷಿಸಿ, ಕೋಲಾರದ ಅಂತರಗಂಗೆ ಅರಣ್ಯಪ್ರದೇಶದಲ್ಲಿ ಬಿಟ್ಟಿದ್ದಾರೆ.

ಅಲ್ಬಿನೋ ಕೋಬ್ರಾ ಎಂದೇ ಕರೆಯಲ್ಪಡುವ ಹಾವುಗಳು ತಮ್ಮ ವರ್ಣದ್ರವ್ಯದ ಜೀನ್‌ಗಳಲ್ಲಿನ ಕೆಲವು ವ್ಯತ್ಯಾಸಗಳಿಂದಾಗಿ ಬಿಳಿಯಾಗಿರುತ್ತವೆ. ಅಧಿಕಾರಿಗಳ ಪ್ರಕಾರ, ಅಲ್ಬಿನೋ ಕೋಬ್ರಾ ಹಾವು ಅಪರೂಪದ ಮತ್ತು ವಿಶಿಷ್ಟ ಜಾತಿಯಾಗಿದೆ.

- Advertisement -

Related news

error: Content is protected !!