Friday, May 3, 2024
spot_imgspot_img
spot_imgspot_img

ಒಂದು ಓಟು ಕೊಡುವ ಏಟು-ರೇಟು..!

- Advertisement -G L Acharya panikkar
- Advertisement -

ಕೇವಲ ಒಂದೇ ಒಂದು ಮತ ಇಡೀ ಚಿತ್ರಣವನ್ನೇ ಬದಲಿಸಬಲ್ಲದು ಎಂಬುವುದಕ್ಕೆ ನಮ್ಮಲ್ಲಿ ಸಾಕಷ್ಟು ಅಚ್ಚರಿಯ ಉದಾಹರಣೆಗಳಿವೆ. ಅದರಲ್ಲಿ ಕೆಲವೊಂದರ ಇತಿಹಾಸ ಇಲ್ಲಿದೆ.

● 2004ರಲ್ಲಿ ಚಾಮರಾಜನಗರ ಜಿಲ್ಲೆಯ ಸಂತೆಮರಹಳ್ಳಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಕೇವಲ ಒಂದು ಮತದಿಂದ ಸೋತ ಜೆಡಿಎಸ್‌ನ ಎ.ಆರ್‌.ಕೃಷ್ಣಮೂರ್ತಿ ಇತಿಹಾಸ ಬರೆದು ಬಿಟ್ಟರು. ಕಾಂಗ್ರೆಸ್‌ನಿಂದ ಗೆದ್ದ ಪ್ರತಿಸ್ಪರ್ಧಿ ಆರ್‌. ಧ್ರುವನಾರಾಯಣ 40,752 ಮತಗಳನ್ನು ಪಡೆದಿದ್ದರೆ, ಕೃಷ್ಣಮೂರ್ತಿ 40,751 ಓಟುಗಳನ್ನು ಪಡೆದು ಕೇವಲ ಒಂದು ಓಟಿನ ಅಂತರದಿಂದ ಸೋತಿದ್ದರು. ವಿಪರ್ಯಾಸವೆಂದರೆ ಆ ದಿನ ಕೃಷ್ಣಮೂರ್ತಿ ಅವರ ವಾಹನ ಚಾಲಕ ಮತ ಚಲಾವಣೆ ಮಾಡಿರಲಿಲ್ಲ.

● 2008ರಲ್ಲಿ ನಡೆದ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಅಲ್ಲಿನ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾಗಿದ್ದ ಸಿ.ಪಿ.ಜೋಶಿಯವರು ಮುಖ್ಯಮಂತ್ರಿ ಸ್ಥಾನದ ಪ್ರಬಲ ಅಭ್ಯರ್ಥಿಯಾಗಿದ್ದರು. ಆದರೆ ದುರಾದೃಷ್ಟವಶಾತ್‌ ಜೋಶಿಯವರು ಕೇವಲ ಒಂದು ಓಟಿನಿಂದ ಬಿಜೆಪಿ ಅಭ್ಯರ್ಥಿ ಕಲ್ಯಾಣಸಿಂಗ್‌ ಚೌಹಾಣ್‌ ವಿರುದ್ಧ ಸೋತಿದ್ದರು. ಇಲ್ಲೂ ವಿಪರ್ಯಾಸದ ಸಂಗತಿಯೆಂದರೆ ಮತದಾನದ ಸಮಯದಲ್ಲಿ ಜೋಶಿಯವರ ಪತ್ನಿ, ಮಗಳು ಹಾಗೂ ವಾಹನ ಚಾಲಕ ದೇವಸ್ಥಾನಕ್ಕೆ ಹೋಗಿದ್ದರು.

● ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಕೇಂದ್ರ ಸರ್ಕಾರ 1999ರಲ್ಲಿ ಕೇವಲ 1 ಮತದ ಅಂತರದಿಂದ ವಿಶ್ವಾಸಮತ ಕಳೆದುಕೊಂಡಿದ್ದು, ಪ್ರಪಂಚದ ಸಂಸದೀಯ ವ್ಯವಸ್ಥೆಯಲ್ಲಿ ಸಾಕ್ಷಿಯಾಗಿ ಉಳಿದು ಬಿಟ್ಟಿತು.

● 1875 ರಲ್ಲಿ ಫ್ರಾನ್ಸ್ ನಲ್ಲಿ ಕೇವಲ ಒಂದು ಮತದಿಂದ ರಾಜಾಡಳಿತವನ್ನು ರದ್ದುಗೊಳಿಸಲಾಯಿತು ಮತ್ತು ಪ್ರಜಾಪ್ರಭುತ್ವವನ್ನು ಸ್ಥಾಪಿಸಲಾಯಿತು.

● ಜರ್ಮನಿಯ ಜನರಿಗೂ ಒಂದು ಮತದ ಶಕ್ತಿಯ ಅರಿವಿದೆ. 1923 ರಲ್ಲಿ ಅಡಾಲ್ಫ್ ಹಿಟ್ಲರ್ ಕೇವಲ ಒಂದು ಮತದ ಅಂತರದಿಂದ ಗೆದ್ದು ನಾಜಿ ಪಕ್ಷದ ಮುಖ್ಯಸ್ಥರಾದರು. ಹೀಗಾಗಿ ಜರ್ಮನಿ ಇತಿಹಾಸ ಶಾಶ್ವತವಾಗಿ ಬದಲಾಯಿತು.

● 1876 ​​ರಲ್ಲಿ ಅಮೆರಿಕಾದಲ್ಲಿ ನಡೆದ 19 ನೇ ಅಧ್ಯಕ್ಷೀಯ ಚುನಾವಣೆಯಲ್ಲಿ ರುದರ್ಫೋರ್ಡ್ ಬಿ.ಹೇಯ್ಸ್ 185 ಮತಗಳನ್ನು ಪಡೆಯುವ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾದರು. ಈ ಚುನಾವಣೆಯಲ್ಲಿ ಅವರ ಪ್ರತಿಸ್ಪರ್ಧಿ ಸ್ಯಾಮ್ಯುಯೆಲ್ ಟಿಲ್ಡೆನ್ ಅವರು 184 ಮತಗಳನ್ನು ಪಡೆದರು. ಹೀಗಾಗಿ ಕೇವಲ ಒಂದು ಮತದ ಅಂತರದಿಂದ ವಿಶ್ವದ ಶ್ರೀಮಂತ ಪ್ರಜಾಪ್ರಭುತ್ವದ ಮುಖ್ಯಸ್ಥರಾಗುವ ಅವಕಾಶವನ್ನು ಕಳೆದುಕೊಂಡರು.

ಒಂದೊಂದು ಮತವೂ ಅಮೂಲ್ಯ. ಒಂದೊಂದು ಮತವೂ ನಿರ್ಣಾಯಕ. ಒಂದೊಂದು ಮತವೂ ಇತಿಹಾಸ ಬದಲಿಸುತ್ತದೆ. ಪ್ರಸ್ತುತ ಲೋಕಸಭಾ ಚುನಾವಣೆ ಸನ್ನಿಹಿತವಾಗಿದೆ. ಪ್ರಜಾಪ್ರಭುತ್ವ ಗೌರವಿಸುವ, ಸರ್ವರನ್ನೂ ಪ್ರೀತಿಸುವ ಉತ್ತಮ ಅಭ್ಯರ್ಥಿ ಪರ ಹಕ್ಕು ಚಲಾಯಿಸಿ. ದೇಶಕ್ಕೆ ಶಕ್ತಿ ತುಂಬಿ.
-ರಶೀದ್ ವಿಟ್ಲ.

- Advertisement -

Related news

error: Content is protected !!