Monday, June 30, 2025
spot_imgspot_img
spot_imgspot_img

ಕಡಬ: ರೈಲ್ವೇ ಹಳಿ ಸಮೀಪ ಆತ್ಮಹತ್ಯೆಗೆ ಶರಣಾದ ನಿವೃತ್ತ ರೈಲ್ವೇ ಉದ್ಯೋಗಿ

- Advertisement -
- Advertisement -

ಕಡಬ: ನಿವೃತ್ತ ರೈಲ್ವೇ ಉದ್ಯೋಗಿಯೊಬ್ಬರು ರೈಲ್ವೇ ಹಳಿ ಸಮೀಪ ಆತ್ಮಹತ್ಯೆ ಮಾಡಿಕೊಂಡ ಘಟನೆ ಕಡಬ ಸಮೀಪ ಕೋಡಿಂಬಾಳದಲ್ಲಿ ನಡೆದಿದೆ.

ಕೋಡಿಂಬಾಳ ಗ್ರಾಮದ ಗುಂಡಿಮಜಲು ನಿವಾಸಿ ಮಾಧವ ರೈ (62) ಆತ್ಮಹತ್ಯೆ ಮಾಡಿಕೊಂಡವರು.
ಮಾಧವ ರೈ ಅವರ ಮೃತದೇಹ ಕೋಡಿಂಬಾಳದ ರೈಲು ಮಾರ್ಗದ ಸಮೀಪ ಗೇರು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೃತರು ಕೋಡಿಂಬಾಳದ ಅಯ್ಯಪ್ಪ ಭಜನಾ ಮಂದಿರದ ಸೇವಾ ಕಾರ್ಯದಲ್ಲಿಯೂ ಸಕ್ರಿಯವಾಗಿ ತೊಡಗಿಕೊಂಡಿದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಕಡಬ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದು, ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತರು ಪತ್ನಿ ಹಾಗೂ 6 ಮಂದಿ ಮಕ್ಕಳನ್ನು ಅಗಲಿದ್ದಾರೆ.

- Advertisement -

Related news

error: Content is protected !!