Thursday, May 2, 2024
spot_imgspot_img
spot_imgspot_img

ತೋಟದಲ್ಲಿ ಬೆಳೆದ ತರಕಾರಿ ತಂದು ಅಡುಗೆ ಮಾಡಿದ ತಾಯಿ; ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಚಿತ್ರಹಿಂಸೆ ನೀಡಿದ ಪಾಪಿ ಮಗ

- Advertisement -G L Acharya panikkar
- Advertisement -

ಪಾಪಿ ಮಗನೊಬ್ಬ ಹೆತ್ತ ತಾಯಿಯನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಹಾಕಿ ಚಿತ್ರಹಿಂಸೆ ನೀಡಿದ ಹೃದಯ ವಿದ್ರಾವಕ ಘಟನೆ ಒಡಿಶಾದ ಕಿಯೊಂಜರ್ ಜಿಲ್ಲೆಯ ಸರಸಪಾಸಿ ಗ್ರಾಮದಲ್ಲಿ ನಡೆದಿದೆ.

ತಾನು ಬೆಳೆದಿದ್ದ ಹೂಕೋಸು ಕಿತ್ತು ತಂದಿದ್ದಕ್ಕೆ ಅಮ್ಮನಿಗೆ ಕೊಡಬಾರದ ಹಿಂಸೆ ನೀಡಿದ್ದಾನೆ. ಹಲ್ಲೆ ಬಳಿಕ ಹೊಲದಲ್ಲಿರುವ ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿದ್ದಾನೆ. 70 ವರ್ಷದ ವೃದ್ಧೆ ತನ್ನ ಕಿರಿಯ ಮಗನ ಜಮೀನಿನಲ್ಲಿ ಬೆಳೆಯಲಾಗಿದ್ದ ತರಕಾರಿಯನ್ನು ಕೊಯ್ದು ಮನೆಯಲ್ಲಿ ಅಡುಗೆ ಮಾಡಿದ್ದಳು. ಈ ವಿಚಾರ ಗೊತ್ತಾಗ್ತಿದ್ದಂತೆಯೇ ಆಕೆಗೆ ಈ ಶಿಕ್ಷೆ ನೀಡಿದ್ದಾನೆ ಎನ್ನಲಾಗಿದೆ.

ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿರೋ ದೃಶ್ಯ ಸ್ಥಳೀಯರ ಕಣ್ಣಿಗೆ ಬಿದ್ದಿದೆ. ಕೂಡಲೇ ಆಕೆಯನ್ನು ರಕ್ಷಣೆ ಮಾಡಲು ಮುಂದಾಗುತ್ತಾರೆ. ಆಗ ಪಾಪಿ ಮಗ ಊರಿನ ಜನರಿಗೂ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಕೊನೆಗೂ ಸ್ಥಳೀಯರು ಆಕೆಯನ್ನು ರಕ್ಷಣೆ ಮಾಡಿ ಬಸುದೇವಪುರ್ ಕಮ್ಯುನಿಟಿ ಹೆಲ್ತ್​ ಸೆಂಟರ್​​ಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಇನ್ನು ಸುಪತ್ರನ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಆತನ ಮೇಲೆ ಕೇಸ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

- Advertisement -

Related news

error: Content is protected !!