Friday, October 2, 2026
spot_imgspot_img
spot_imgspot_img

ಶ್ರೀ ಉಮಾಮಹೇಶ್ವರ ಭಜನಾ ಮಂಡಳಿ ಮತ್ತು ಶ್ರೀ ಉಮಾಮಹೇಶ್ವರ ಸೇವಾ ವಿಶ್ವಸ್ಥ ಮಂಡಳಿ ಇದರ ಜಂಟಿ ಆಶ್ರಯದಲ್ಲಿ ಮೂರು ದಿನಗಳ ಭಜನಾ ತರಬೇತಿ ಕಮ್ಮಟ

- Advertisement -
- Advertisement -

ಮಾಮೇಶ್ವರ: ಶ್ರೀ ಉಮಾಮಹೇಶ್ವರ ಭಜನಾ ಮಂಡಳಿ ಮತ್ತು ಶ್ರೀ ಉಮಾಮಹೇಶ್ವರ ಸೇವಾ ವಿಶ್ವಸ್ಥ ಮಂಡಳಿ ಇದರ ಜಂಟಿ ಆಶ್ರಯದಲ್ಲಿ ಮೂರು ದಿನಗಳ ಭಜನಾ ತರಬೇತಿ ಕಮ್ಮಟ ಶ್ರೀ ಉಮಾಮಹೇಶ್ವರ ಸಭಾಂಗಣದಲ್ಲಿ ನಡೆಯಲಿದೆ.

ಭಜನಾ ತರಬೇತಿಯು ಅ. 02, 03 & 04 ರಂದು ಬೆಳಿಗ್ಗೆ 9:00 ರಿಂದ ಸಂಜೆ 4:00ರವರೆಗೆ ನಡೆಯಲಿದೆ.

ಎಂಟು ವರ್ಷ ಮೇಲ್ಪಟ್ಟ ಎಲ್ಲಾ ಮಕ್ಕಳಿಗೂ, ಸಹೋದರ-ಸಹೋದರಿಯರಿಗೂ ಅವಕಾಶವಿದ್ದು, ಶಿಬಿರದಲ್ಲಿ ಭಜನಾ ಪದಗಳ ಅಭ್ಯಾಸ, ತಾಳ, ಲಯ ಮತ್ತು ಸಂಗೀತದ ಮೂಲಭೂತಗಳು, ಸಮೂಹ ಭಜನಾ ಅಭ್ಯಾಸ, ಭಕ್ತಿಯ ಸಂದೇಶ ಮತ್ತು ಸಾಹಿತ್ಯ ಪರಿಚಯ ಕುರಿತು ತರಬೇತಿ ನೀಡಲಾಗುವುದು.

ತರಬೇತಿಗೆ ಬರುವವರು ಸಾಂಪ್ರದಾಯಿಕ ಉಡುಪು ಧರಿಸಿ, ತಾಳದೊಂದಿಗೆ ಬರಬೇಕು ಎಂದು ಸಂಘಟಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!