Sunday, May 5, 2024
spot_imgspot_img
spot_imgspot_img

ಮನೆ ಸ್ವಚ್ಛಗೊಳಿಸುವಾಗ 5ನೇ ಮಹಡಿಯಿಂದ ಬಿದ್ದು ಮಹಿಳೆ ಮೃತ್ಯು…!

- Advertisement -G L Acharya panikkar
- Advertisement -

ಮನೆ ಸ್ವಚ್ಛಗೊಳಿಸುವಾಗ ಮಹಿಳೆಯೊಬ್ಬಳು ಅಪಾರ್ಟ್ಮೆಂಟ್​ನ 5ನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ಬೆಂಗಳೂರಿನ ಕಾಡುಗೋಡಿ ಸಮೀಪದ ದೊಡ್ಡಬನಹಳ್ಳಿಯಲ್ಲಿ ನಡೆದಿದೆ.

ದೊಡ್ಡಬನಹಳ್ಳಿಯ ಬಿಡಿಎ ವಿಂಧ್ಯಗಿರಿ ಅಪಾರ್ಟಮೆಂಟ್‌ನಲ್ಲಿ ಈ ಘಟನೆ ನಡೆದಿದೆ. ಖುಷ್ಬೂ ಅಶೀಷ್ ತ್ರಿವೇದಿ (31 ) ಮೃತ ಮಹಿಳೆ. ಗುಜರಾತ್ ಮೂಲದ ಖುಷ್ಬೂ ಹಾಗೂ ಆಶೀಶ್ ಇತ್ತೀಚೆಗಷ್ಟೆ ಮದುವೆಯಾಗಿದ್ದು, ದೊಡ್ಡಬನಹಳ್ಳಿಯ ವಿಂಧ್ಯಗಿರಿ ಅಪಾರ್ಟಮೆಂಟ್​ನ 5ನೇ ಮಹಡಿಯಲ್ಲಿ ವಾಸವಾಗಿದ್ದರು. ಆದರೆ, ಇಂದು ಪ್ಲಾಟ್ ಮುಂಭಾಗ ಶೂ ಬಾಕ್ಸ್ ಕ್ಲೀನ್ ಮಾಡುತ್ತಿದ್ದ ವೇಳೆ ಖುಷ್ಬೂ ಆಯಾತಪ್ಪಿ ಕೆಳಗೆ ಬಿದ್ದಿದ್ದಾಳೆ.

ಈ ವೇಳೆ ಗಂಭೀರ ಗಾಯವಾಗಿ ಗಾಯಗೊಂಡಿದ್ದ ಖುಷ್ಬೂ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಬಗ್ಗೆ ಕಾಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!