Friday, May 3, 2024
spot_imgspot_img
spot_imgspot_img

ಗೆಳತಿಯನ್ನು ಮದುವೆಯಾಗಲು ಜನ್ಮದಿನದಂದೇ ಗಂಡಾಗಿ ಬದಲಾದ ಮಹಿಳೆ..!

- Advertisement -G L Acharya panikkar
- Advertisement -

ತೃತೀಯಲಿಂಗಿಯೊಬ್ಬರು ತನ್ನ ಬಹುಕಾಲದ ಗೆಳತಿಯನ್ನು ಕಾನೂನುಬದ್ಧವಾಗಿ ಮದುವೆಯಾದ ಘಟನೆ ಮಧ್ಯಪ್ರದೇಶದ ಇಂದೋರ್​ ನಗರದಲ್ಲಿ ನಡೆದಿದೆ. ಅಸ್ತಿತ್ವ ಸೋನಿ ಪುರುಷನಾಗಿ ಬದಲಾಗುವ ಮುನ್ನ ಅಲ್ಕಾ ಸೋನಿ ಎಂದು ಕರೆಯಲಾಗುತ್ತಿತ್ತು.

ಅಸ್ಥಾ ಎಂಬಾಕೆಯನ್ನು ಕೌಟುಂಬಿಕ ನ್ಯಾಯಾಲಯದಲ್ಲಿ ಸರಳವಾಗಿ ಮದುವೆಯಾಗಿದ್ದಾರೆ. ಈ ಮದುವೆಗೆ ಎರಡೂ ಕುಟುಂಬದ ಸದಸ್ಯರು ಒಪ್ಪಿದ್ದಾರೆ. ಅಲ್ಕಾ ಸೋನಿಯಾಗಿ ಹುಟ್ಟಿ, ಕೆಲವು ವರ್ಷಗಳ ಬಳಿಕ ತಾನು ಹೆಣ್ಣಲ್ಲ ಎಂದು ಭಾವಿಸಿ, ಗಂಡಾಗಿ ಬದಕಲು ನಿರ್ಧರಿಸಿದ ಬಳಿಕ ತನ್ನ 47ನೇ ಹುಟ್ಟುಹಬ್ಬದಂದು ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ ಒಳಗಾಗಿ, ಅಸ್ತಿತ್ವ ಎಂದು ಹೆಸರು ಬದಲಾಯಿಸಿಕೊಂಡು ಇದೀಗ ತನ್ನ ಬಹುಕಾಲದ ಗೆಳತಿಯನ್ನು ವರಿಸಿದ್ದಾರೆ.

ಭಿನ್ನಲಿಂಗೀಯ ಸಂಬಂಧದಲ್ಲಿರುವ ತೃತೀಯಲಿಂಗಿಗಳು, ವಿವಾಹವನ್ನು ನಿಯಂತ್ರಿಸುವ ವೈಯಕ್ತಿಕ ಕಾನೂನುಗಳು ಸೇರಿದಂತೆ ಅಸ್ತಿತ್ವದಲ್ಲಿರುವ ಕಾನೂನುಗಳ ಅಡಿಯಲ್ಲಿ ಮದುವೆಯಾಗುವ ಹಕ್ಕನ್ನು ಹೊಂದಿದ್ದಾರೆ ಎಂದು ಕಳೆದ ಅಕ್ಟೋಬರ್‌ನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ ಈ ಅಭೂತಪೂರ್ವ ವಿವಾಹವು ನಡೆದಿದೆ. ತಮ್ಮ ಸಂಪ್ರದಾಯದ ಪ್ರಕಾರ ನವವಿವಾಹಿತರು ಡಿಸೆಂಬರ್ 11ರಂದು ಸಪ್ತಪದಿ ಎಂದು ಕರೆಯಲ್ಪಡುವ ಪವಿತ್ರ ಬೆಂಕಿಯ ಸುತ್ತಲೂ ಏಳು ಸುತ್ತುಗಳನ್ನು ಸುತ್ತುವ ಮೂಲಕ ತಮ್ಮ ವಿವಾಹವನ್ನು ಆಚರಿಸಲಿದ್ದಾರೆ.

ತಮ್ಮ ಮದುವೆಗೂ ಮುನ್ನ ದಂಪತಿ, ಇಂದೋರ್ ಜಿಲ್ಲಾಧಿಕಾರಿ ರೋಶನ್ ರೈ ಅವರಿಗೆ ಅರ್ಜಿ ಸಲ್ಲಿಸಿ, ತಮ್ಮ ಪರಿಸ್ಥಿತಿಯನ್ನು ವಿವರಿಸಿದ್ದರು. ಜಿಲ್ಲಾಧಿಕಾರಿಗಳ ಪರಿಶೀಲನೆಯ ಬಳಿಕ ಇಬ್ಬರ ಅರ್ಜಿಯನ್ನು ಸ್ವೀಕರಿಸಿ, ಎರಡೂ ಕುಟುಂಬದವರಿಗೆ ಮಾಹಿತಿ ನೀಡಲಾಯಿತು. ಗುರುವಾರ ಆಸ್ತಿತ್ವ ಮತ್ತು ಅಸ್ತಾ ಕುಟುಂಬಗಳು ನ್ಯಾಯಾಲಯಕ್ಕೆ ಹಾಜರಾಗಿ ಜಂಟಿ ಸಾಕ್ಷಿಗಳ ಸಮ್ಮುಖದಲ್ಲಿ ನವದಂಪತಿ ತಮ್ಮ ವಿವಾಹ ಪ್ರಮಾಣಪತ್ರವನ್ನು ಪಡೆದರು.

ತಮ್ಮ ಮದುವೆಯ ನಂತರ ಅಸ್ತಿತ್ವ ಮತ್ತು ಅಸ್ಥಾ ಇಬ್ಬರೂ ತಮ್ಮ ಸಂತೋಷವನ್ನು ವ್ಯಕ್ತಪಡಿಸಿದ್ದು, ನಮ್ಮ ನಡುವಿನ ವಿಷಯಗಳನ್ನು ಸರಿಯಾಗಿ ಅರ್ಥಮಾಡಿಕೊಂಡ ಬಳಿಕ ಮದುವೆಯಾಗಲು ನಿರ್ಧರಿಸಿದ್ದೇವೆ. ನಮ್ಮ ಸಂಬಂಧವನ್ನು ನಿರ್ಧರಿಸುವ ಮೊದಲು ಹಲವಾರು ತಿಂಗಳುಗಳು ಆಲೋಚನೆ ಮಾಡಿದ್ದೆವು ಎಂದು ಅಸ್ಥಾ ಹೇಳಿದರು.

ಆಸ್ಥಾ ಅವರು ಅಸ್ತಿತ್ವರನ್ನು ಮೊದಲ ಬಾರಿಗೆ ತಮ್ಮ ಮನೆಯಲ್ಲೇ ಭೇಟಿ ಮಾಡಿದರು. ಏಕೆಂದರೆ, ಅಸ್ತಿತ್ವ, ಅಸ್ಥಾಳ ಸಹೋದರಿ ಆತ್ಮೀಯ ಸ್ನೇಹಿತ. ಪರಸ್ಪರ ಪರಿಚಯ, ಆತ್ಮೀಯ ಮಾತುಗಳ ಬಳಿಕ ಆಳವಾದ ಪ್ರೀತಿ ಇಬ್ಬರಲ್ಲೂ ಶುರುವಾಯಿತು. ಬಳಿಕ ಎರಡೂ ಮನೆಯವರ ಒಪ್ಪಿಗೆ ಮೇರೆಗೆ ಮದುವೆ ನಿಶ್ಚಯಿಸಲಾಗಿತ್ತು. ಇದೀಗ ನ್ಯಾಯಾಲಯದಲ್ಲಿ ಸರಳವಾಗಿ ಮದುವೆಯಾಗಿರುವ ಜೋಡಿಮ, ಡಿಸೆಂಬರ್ 11 ರಂದು ಅದ್ಧೂರಿ ವಿವಾಹವನ್ನು ಮಾಡಿಕೊಳ್ಳಲಿದ್ದಾರೆ.

- Advertisement -

Related news

error: Content is protected !!