- Advertisement -
- Advertisement -
ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಕಟ್ಟಡದಿಂದ ಕೆಳಗಡೆ ಬಿದ್ದು ಮಂಗಳೂರಿನ ದೇರಳಕಟ್ಟೆಯ ಯುವಕನೋರ್ವ ಮೃತಪಟ್ಟ ಘಟನೆ ಅಬುದಾಬಿಯಲ್ಲಿ ನಿನ್ನೆ ನಡೆದಿದೆ.
ಮೃತಪಟ್ಟ ಯುವಕನನ್ನು ನೌಫಲ್ ಪಟ್ಟೋರಿ(24) ಎಂದು ಗುರುತಿಸಲಾಗಿದೆ.
ದುಬೈನಲ್ಲಿ ಎ.ಸಿ ಟೆಕ್ನಿಶಿಯನ್ ಆಗಿ ಕೆಲಸ ನಿರ್ವಹಿಸುತ್ತಿದ್ದ ನೌಫಲ್ ಪಟ್ಟೋರಿ ಕೆಲಸದ ಹಿನ್ನಲೆ ಕಟ್ಟಡವೊಂದರ ಮೇಲಿನಿಂದ ಆಯ ತಪ್ಪಿ ಕೆಳಗಡೆ ಬಿದ್ದು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮೃತದೇಹವು ಖಲೀಫಾ ಆಸ್ಪತ್ರೆಯಲ್ಲಿದೆ ಎಂದು ತಿಳಿದು ಬಂದಿದೆ.
- Advertisement -