Tuesday, April 23, 2024
spot_imgspot_img
spot_imgspot_img

ಪುತ್ತೂರು : ವಿಧಾನಸಭಾ ಕ್ಷೇತ್ರದಲ್ಲಿ 2,10,427 ಮತದಾರರು, 80 ವರ್ಷ ಮೇಲ್ಪಟ್ಟವರು, ವಿಕಲಚೇತನರಿಗೆ ಮನೆಯಲ್ಲೇ ಮತದಾನ

- Advertisement -G L Acharya panikkar
- Advertisement -

ಪುತ್ತೂರು: ಕರ್ನಾಟಕದ ವಿಧಾನಸಭೆಗೆ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ. ಈ ಬಾರಿ 80 ವರ್ಷ ಮೇಲ್ಪಟ್ಟವರಿಗೆ, ವಿಕಲ ಚೇತನರಿಗೆ, ಕೋವಿಡ್ ರೋಗಿಗಳಿಗೆ ಮನೆಯಲ್ಲಿ ಮತದಾನಕ್ಕೆ ಅವಕಾಶವಿದೆ. ಅವರು ಮನೆಯಲ್ಲೇ ಬ್ಯಾಲೆಟ್ ಪೇಪರ್‌ ಮೂಲಕ ಮತದಾನ ಮಾಡಬಹುದು ಎಂದು ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಯಾಗಿರುವ ಸಹಾಯಕ ಕಮಿಷನರ್ ಗಿರೀಶ್ ನಂದನ್ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಪುತ್ತೂರು ಕ್ಷೇತ್ರದಲ್ಲಿ ಇವತ್ತಿನ ತನಕದ ಮಾಹಿತಿಯಂತೆ ಒಟ್ಟು 2,10,427 ಮತದಾರರಿದ್ದಾರೆ. ಈ ಪೈಕಿ 1 ಲಕ್ಷ 3 ಸಾವಿರದ 825 ಪುರುಷರು, 1 ಲಕ್ಷ 6 ಸಾವಿರದ 599 ಮಂದಿ ಮಹಿಳೆಯರಿದ್ದಾರೆ. 4482 ಮಂದಿ 80 ವರ್ಷ ಮೇಲ್ಪಟ್ಟವರಿದ್ದಾರೆ. 2047 ಮಂದಿ ವಿಕಲಚೇತನರಿದ್ದಾರೆ. ಅವರಿಗೆ ಇಷ್ಟಾನುಸಾರ ಅವರು ಮನೆಯಲ್ಲಿ ಮತದಾನಕ್ಕೆ ಅವಕಾಶವಿದೆ ಎಂದು ಅವರು ಮಾಹಿತಿ ನೀಡಿದರು. ಉಳಿದಂತೆ ಪುತ್ತೂರು ತಾಲೂಕಿನ ಚೆಕ್ ಪೋಸ್ಟ್, ಕಂಟ್ರೋಲ್ ರೂಮ್ ಕುರಿತು ಅವರು ಮಾಹಿತಿ ನೀಡಿದರು. ನಗರಸಭೆ ಪೌರಾಯುಕ್ತ ಮಧು ಎಸ್ ಮನೋಹರ್, ತಾ.ಪಂ ಕಾರ್ಯನಿರ್ವಾಹಕಾಧಿಕಾರಿ ನವೀನ್ ಕುಮಾರ್ ಭಂಡಾರಿ ಎಚ್‌., ಉಪತಹಸೀಲ್ದಾರ್ ಸುಲೋಚನಾ ಉಪಸ್ಥಿತರಿದ್ದರು.

- Advertisement -

Related news

error: Content is protected !!