Sunday, November 3, 2024
spot_imgspot_img
spot_imgspot_img

ಸಿಎಂ ಇದ್ದ ವೇದಿಕೆಗೆ ಏಕಾಏಕಿ ನುಗ್ಗಿದ ಯುವಕ; ಗಣ್ಯರು ಆತಂಕ

- Advertisement -
- Advertisement -

ಬೆಂಗಳೂರು: ವಿಧಾನಸೌಧದ ಮುಂದೆ ನಡೆಯುತ್ತಿರುವ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಯುವಕನೋರ್ವ ಸಿಎಂ ಸಿದ್ದರಾಮಯ್ಯ ಅವರು ಕುಳಿತುಕೊಂಡಿದ್ದ ವೇದಿಕೆಯ ಮೇಲೆ ಏಕಾಏಕಿ ಜಿಗಿದ ಯುವಕ ಗಾಬರಿ‌ ಮೂಡಿಸಿದ್ದಾನೆ.

ಕಾರ್ಯಕ್ರಮದಲ್ಲಿ ವೇದಿಕೆ ಮೇಲ್ಭಾಗಕ್ಕೆ ಯುವಕ ಜಂಪ್ ಮಾಡಿದ್ದಾನೆ. ಈ ವೇಳೆ ವೇದಿಕೆ ಮೇಲಿದ್ದ ಹಲವು ಗಣ್ಯರು ತಬ್ಬಿಬ್ಬಾಗಿದ್ದಾರೆ. ಸಿಎಂ ಅಂಗರಕ್ಷಕರು ಕೂಡಲೇ ಆ ಯುವಕನನ್ನ ವಶಕ್ಕೆ ಪಡೆದಿದ್ದಾರೆ. ಈ ರೀತಿ ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮದಲ್ಲಿ ಭದ್ರತಾ ಲೋಪ ಕಂಡುಬಂದಿದೆ ಎಂದು ಹೇಳಲಾಗಿದೆ.

ವಶಕ್ಕೆ ಪಡೆದರೂ ಯುವಕ ಸಿಎಂ ಕಡೆ ಶಾಲು ಎಸೆದಿದ್ದಾನೆ. ಈ ರೀತಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಯುವಕನೋರ್ವ ಆತಂಕ ಸೃಷ್ಟಿಸಿದ್ದಾನೆ.

- Advertisement -

Related news

error: Content is protected !!