Monday, April 29, 2024
spot_imgspot_img
spot_imgspot_img

ಧ್ವಜಸ್ತಂಭ ನೆಡುವ ವೇಳೆ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಯುವಕ ಮೃತ್ಯು

- Advertisement -G L Acharya panikkar
- Advertisement -

ಕನ್ನಡ ರಾಜ್ಯೋತ್ಸವಕ್ಕೆ ಧ್ವಜಸ್ತಂಭ ನೆಡುವ ವೇಳೆ ಆಕಸ್ಮಿಕವಾಗಿ ವಿದ್ಯುತ್ ಪ್ರವಹಿಸಿ ಯುವಕ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ವಕ್ಕುಂದ ಗ್ರಾಮದಲ್ಲಿ ನಡೆದಿದೆ.

ಪ್ರಜ್ವಲ್ ಚನ್ನಗೌಡ ಮುನೇಪ್ಪನವರ(18) ಮೃತ ದುರ್ದೈವಿಯಾಗಿದ್ದಾನೆ.

ಕನ್ನಡ ರಾಜ್ಯೋತ್ಸವ ಆಚರಣೆಗಾಗಿ ಸ್ಥಳೀಯ ಬಸ್ ನಿಲ್ದಾಣದ ಮುಂದೆ ಧ್ವಜಸ್ತಂಭ ನಿರ್ಮಿಸಿ ಧ್ವಜಾರೋಹಣಕ್ಕೆ ಗ್ರಾಮದ ಯುವಕರು ಸಿದ್ಧತೆ ನಡೆಸಿದ್ದರು. ಶನಿವಾರ ಸಂಜೆ ಧ್ವಜಸ್ತಂಭ ನೆಡುವ ಸಂದರ್ಭ ಅಲ್ಲಿಯೇ ಹಾದು ಹೋಗಿದ್ದ ಸರ್ವೀಸ್ ವಿದ್ಯುತ್ ತಂತಿಗೆ ಧ್ವಜಸ್ತಂಭ ತಾಗಿದೆ. ಇದರಿಂದಾಗಿ ಕಂಬ ಹಿಡಿದಿದ್ದ ಪ್ರಜ್ವಲ್​​ಗೆ ವಿದ್ಯುತ್ ಪ್ರವಹಿಸಿದೆ. ತಕ್ಷಣ ಕುಸಿದುಬಿದ್ದ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ವೈದರು ಮೃತಪಟ್ಟಿದ್ದಾನೆಂದು ಘೋಷಿಸಿದ್ದಾರೆ.

ಅಗ್ನಿವೀರ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದ ಪ್ರಜ್ವಲ್, ದೈಹಿಕ ಪರೀಕ್ಷೆಗಾಗಿ ತಯಾರಾಗುತ್ತಿದ್ದರು. ಅಷ್ಟರೊಳಗೆ ಅವಘಡ ಸಂಭವಿಸಿದ್ದು, ಮನೆ ಮಗನನ್ನು ಕಳೆದುಕೊಂಡ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

- Advertisement -

Related news

error: Content is protected !!