Sunday, June 7, 2026
spot_imgspot_img
spot_imgspot_img

ಅತ್ತಿಗೆಯನ್ನು ಗುರಾಯಿಸಿದ ಯುವಕ; ಪ್ರಶ್ನಿಸಿದ ಯುವತಿಗೆ ಕಲ್ಲಿನಿಂದ ಹಲ್ಲೆ

- Advertisement -
- Advertisement -
vtv vitla

ಅತ್ತಿಗೆಯನ್ನು ಗುರಾಯಿಸಿದ್ದನ್ನು ಪ್ರಶ್ನಿಸಿ ಬುದ್ಧಿವಾದ ಹೇಳುವಂತೆ ತಾಯಿಗೆ ಸೂಚಿಸಿದ್ದಕ್ಕೆ ಯುವಕನೊಬ್ಬ ಯುವತಿ ಮೇಲೆ ಹಲ್ಲೆ ನಡೆಸಿದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯ ಆಶ್ರಯ ಬಡಾವಣೆಯಲ್ಲಿ ನಡೆದಿದೆ. ಮಹಿಳೆಯನ್ನು ಗುರಾಯಿಸಿ ಹಲ್ಲೆ ನಡೆಸಿದ ಯುವಕ ಯುವರಾಜ್ ವಿರುದ್ಧ ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಜಾತ ಎಂಬ ಮಹಿಳೆಯನ್ನು ಯುವರಾಜ್​​​​​ ಗುರಾಯಿಸುತ್ತಿದ್ದ. ಇದನ್ನು ಪ್ರಶ್ನಿಸಿದ ಯುವತಿ ಸುಧಾ, ನಿಮ್ಮ ಮಗನಿಗೆ ಬುದ್ಧಿವಾದ ಹೇಳುವಂತೆ ಯುವರಾಜ್ ತಾಯಿಗೆ ಸೂಚಿಸಿದ್ದಾಳೆ. ಇದರಿಂದ ಕೋಪಗೊಂಡ ಯುವರಾಜ್, ಸುಧಾಳಿಗೆ ಕಲ್ಲಿನಿಂದ ಹೊಡೆದ ಹಲ್ಲೆ ನಡೆಸಿದ್ದಾನೆ. ಹಲ್ಲೆಯಿಂದ ಗಾಯಗೊಂಡಿರುವ ಸುಧಾಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಯುವತಿ ನೀಡಿದ ದೂರಿನ ಅನ್ವಯ ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

- Advertisement -

Related news

error: Content is protected !!