Saturday, June 28, 2025
spot_imgspot_img
spot_imgspot_img

ಹೆಣ್ಣಿನಾಸೆಗೆ ಬಿದ್ದು ಹನಿಟ್ರ್ಯಾಪ್‌ಗೊಳಗಾದ ಯುವಕ; ಬರೋಬ್ಬರಿ 41ಲಕ್ಷ ರೂ. ಕಳೆದುಕೊಂಡ ಬಳಿಕ ಪೊಲೀಸ್‌ ಠಾಣಾ ಮೆಟ್ಟಿಲೇರಿದ

- Advertisement -
- Advertisement -

ಹೆಣ್ಣಿನಾಸೆಗೆ ಬಿದ್ದು ಯುವಕನೋರ್ವ ಬರೋಬ್ಬರಿ 41 ಲಕ್ಷ ರೂ. ಕಳೆದುಕೊಂಡು ಇದೀಗ ಪೊಲೀಸ್‌ ಠಾಣಾ ಮೆಟ್ಟಿಲೇರಿದ ಘಟನೆ ರಾಮನಗರದಲ್ಲಿ ನಡೆದಿದೆ.‘ಗೀತಾ ಸೆಕ್ಸಿ’ ಎಂಬ ನಕಲಿ ಫೇಸ್‌ಬುಕ್‌ನ ಖಾತೆ ಮೂಲಕ ರಾಮನಗರ ಜಿಲ್ಲೆಯ ಕನಕಪುರದ ಯುವಕನಿಗೆ ಮೋಸ ಮಾಡಲಾಗಿದೆ. ಈ ಸಂಬಂಧ ರಾಮನಗರದ ಸೈಬರ್​ ಕ್ರೈಂ ಠಾಣೆಯಲ್ಲಿ ದೂರು ದಾಖಲಾಗಿದೆ.

ಫೇಸ್​ಬುಕ್​ನಲ್ಲಿ ಗೀತಾ ಸೆಕ್ಸಿ ಎಂಬ ಖಾತೆಯಲ್ಲಿರುವ ಸುಂದರವಾದ ಯುವತಿಯ ಪೋಟೋ ಕಂಡು ಮರುಳಾದ ಯುವಕ ನಕಲಿ ಖಾತೆಯನ್ನು ಸಂಪರ್ಕಿಸಿದ್ದಾನೆ. ಫೇಸ್​ಬುಕ್​ನ ಬಯೋದಲ್ಲಿ ‘ಬೆಂಗಳೂರಿನಿಂದ ಹಾಸನ, ಕುಣಿಗಲ್, ರಾಮನಗರ, ಶಿವಮೊಗ್ಗದವರೆಗೂ ಸರ್ವೀಸ್ ಇದೆ. ಫ್ರೆಶ್ ಹುಡುಗಿರು ಇದ್ದಾರೆ’ ಎಂದು ಬರೆದಿತ್ತು.

ಇದನ್ನು ಓದಿದ ಯುವಕ ಮೆಸೇಜ್ ಮಾಡಿದ್ದಾರೆ. ಹುಡುಗಿ ಬೇಕಾದರೆ 800ರೂಪಾಯಿ ಹಣದೊಂದಿಗೆ ನಿಮ್ಮ ಫೋಟೋವನ್ನು ಕಳುಹಿಸಿ ಎಂದು ರಿಪ್ಲೈ ಬಂದಿತ್ತು. ಹೌದು ಎಂದು ನಂಬಿದ ಆ ಯುವಕ ಹಣ ಮತ್ತು ಫೋಟೋವನ್ನು ಕಳುಹಿಸಿದ್ದ.

ಫೋಟೋ ಕಳುಹಿಸುತ್ತಿದ್ದಂತೆ ಆ ಫೋಟೋವನ್ನು ಬೆತ್ತಲೆಯಾಗಿ ಮಾರ್ಪಿಂಗ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ನಿನ್ನ ಸ್ನೇಹಿತರಿಗೆ ಹಾಗೂ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡೋದಾಗಿ ಬೆದರಿಸಿದ್ದಾರೆ. ಇದರಿಂದ ಗಾಬರಿಯಾದ ಯುವಕ ಹಣ ನೀಡಿದ್ದಾನೆ. ವರದಿಗಳ ಪ್ರಕಾರ ಕಳೆದ ಆರು ತಿಂಗಳಿಂದ ಸುಮಾರು 41 ‌ಲಕ್ಷ ರೂಪಾಯಿ ಹಣವನ್ನು ಪೀಕಿದ್ದಾರೆ. ಫೋನ್​ ಪೇ, ಗೂಗಲ್ ಪೇ ಮೂಲಕ ಹಣವನ್ನು ವರ್ಗಾಯಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ರಾಮನಗರ ಸೈಬರ್​ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -

Related news

error: Content is protected !!