


ವಿಟ್ಲ : ಬಿಲ್ಲವ ಸಂಘ (ರಿ.) ವಿಟ್ಲ, ಮಹಿಳಾ ಬಿಲ್ಲವ ಘಟಕ ಹಾಗೂ ಯುವವಾಹಿನಿ (ರಿ) ಘಟಕ ವಿಟ್ಲ ಇದರ ಜಂಟಿ ಆಶ್ರಯದಲ್ಲಿ “ಆಟಿ ತಿಂಗೊಲ್ದ ಪೊಲಬು” ಕಾರ್ಯಕ್ರಮವು ದಿನಾಂಕ 21-07-2024 ಆದಿತ್ಯವಾರ ಬೆಳಿಗ್ಗೆ 10:30 ರಿಂದ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನ ಶಿವಗಿರಿ ಪೊನ್ನೊಟ್ಟು-ವಿಟ್ಲ ಇಲ್ಲಿ ನಡೆಯಲಿದೆ.
ಈ ಕಾರ್ಯಕ್ರಮವು ಮಮತ ಸಂಜೀವ ಪೂಜಾರಿ ಅಧ್ಯಕ್ಷರು, ಮಹಿಳಾ ಜಿಲ್ಲವ ಘಟಕ ವಿಟ್ಲ ಇವರ ಅಧ್ಯಕ್ಷತೆಯಲ್ಲಿ ಜರಗಲಿದೆ. ವೇದಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಡಾ| ತುಕರಾಂ ಪೂಜಾರಿ ಅಧ್ಯಕ್ಷರು, ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ, ಸಂಚಯನಗಿರಿ ಬಂಟ್ವಾಳ, ದ.ಕ., ಮುಖ್ಯ ಅತಿಥಿಗಳಾಗಿ ಉಷಾ ಅಂಚನ್ ಅಧ್ಯಕ್ಷರು, ಕಾಮಧೇನು ಮಹಿಳಾ ಸಹಕಾರಿ ಸಂಘ ನೆಲ್ಯಾಡಿ- ಕಡಬ ತಾಲೂಕು, ದೇವಕಿ ಜೆ.ಜಿ. ಶಿಕ್ಷಕಿ, ಸರಕಾರಿ ಮಾದರಿ ಉನ್ನತೀಕರಿಸಿದ ಹಿ.ಪ್ರಾ. ಶಾಲೆ ಉಪ್ಪಿನಂಗಡಿ ಭಾಗವಹಿಸಲಿದ್ದಾರೆ. ಮಾಧವ ಪೂಜಾರಿ ಅಧ್ಯಕ್ಷರು, ಬಿಲ್ಲವ ಸಂಘ ವಿಟ್ಲ , ಬಾಬು ಕೊಪ್ಪಳ ಗೌರವಾಧ್ಯಕ್ಷರು, ಬಿಲ್ಲವ ಸಂಘ ವಿಟ್ಲ, ಲಕ್ಷ್ಮಣ ಪೂಜಾರಿ ಕಾರ್‍ಯದರ್ಶಿ, ಜಿಲ್ಲವ ಸಂಘ ವಿಟ್ಲ, ರಾಜೇಶ್ ವಿಟ್ಲ ಅಧ್ಯಕ್ಷರು, ಯುವವಾಹಿನಿ (ರಿ) ವಿಟ್ಲ ಘಟಕ ಪ್ರೇಮಲತಾ ಸೋಮಶೇಖರ್ ಗೌರವಾಧ್ಯಕ್ಷರು, ಮಹಿಳಾ ಬಿಲ್ಲವ ಘಟಕ ವಿಟ್ಲ ,ಭಾರತಿ ಪ್ರಕಾಶ್ ಕಾರ್‍ಯದರ್ಶಿ, ಮಹಿಳಾ ಜಿಲ್ಲವ ಘಟಕ ವಿಟ್ಲ ,ಶೋಭಾ ವಿಶ್ವನಾಥ್ ಕಾರ್‍ಯದರ್ಶಿ ಇವರುಗಳ ಗೌರವ ಉಪಸ್ಥಿತಿಯಲ್ಲಿ ಈ ಕಾರ್ಯಕ್ರಮವು ಜರಗಳಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
