Saturday, June 13, 2026
spot_imgspot_img
spot_imgspot_img

ಮಂಗಳೂರು: ಪ್ಲ್ಯಾಟ್ ನಲ್ಲಿ ನೇಣಿಗೆ ಶರಣಾದ ರಾಷ್ಟ್ರೀಕೃತ ಬ್ಯಾಂಕ್ ಮ್ಯಾನೇಜರ್

- Advertisement -
- Advertisement -

ಮಂಗಳೂರು: ಇತ್ತೀಚೆಗೆ ಖರೀದಿಸಿದ ಹೊಸ ಪ್ಲ್ಯಾಟ್ ನಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಒಂದರ ಮಹಿಳಾ ಮ್ಯಾನೆಜರ್ ನೇಣಿಗೆ ಶರಣಾದ ಘಟನೆ ಯಯ್ಯಾಡಿ ಬಳಿ ನಡೆದಿದೆ. ಮೃತರನ್ನು ರಾಷ್ಟ್ರೀಕೃತ ಬ್ಯಾಂಕ್ ನ ಬಿಜೈ ಶಾಖೆಯಲ್ಲಿ ಮ್ಯಾನೆಜರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಪದ್ಮಾವತಿ(52) ಎಂದು ಗುರುತಿಸಲಾಗಿದೆ.

ಯೆಯ್ಯಾಡಿಯಲ್ಲಿ ಇತ್ತೀಚೆಗಷ್ಟೇ ಹೊಸ ಫ್ಲ್ಯಾಟ್ ಖರೀದಿಸಿದ ಪದ್ಮಾವತಿ ಅವರು ಬ್ಯಾಂಕಿನ ಕೀಗಳನ್ನು ಗಂಡನ ಬಳಿ ಕಳುಹಿಸಿ ಕೊಟ್ಟಿದ್ದರು ಮತ್ತು ನೈಲನ್ ದಾರದ ಬಗ್ಗೆ ವಿಚಾರಿಸಿದ್ದರು. ಆಕೆಯ ತಂಗಿ ನಿನ್ನೆ ಕರೆ ಮಾಡಿದಾಗ ಕರೆ ಸ್ವೀಕರಿಸದ ಕಾರಣ ಪರಿಶೀಲನೆ ಮಾಡಿದಾಗ ಆಕೆ ನೂತನವಾಗಿ ಖರೀದಿಸಿದ ಫ್ಲಾಟಿನ ಫ್ಯಾನಿಗೆ ಆಗಲೇ ಕೊರಳೊಡ್ಡಿಯಾಗಿತ್ತು ಎನ್ನಲಾಗಿದೆ.

ಈ ಬಗ್ಗೆ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಎಲ್ಲಾ ಆಯಾಮಗಳಿಂದ ತನಿಖೆ ಮುಂದುವರೆದಿದೆ. ಬ್ಯಾಂಕಿನ ಹಿರಿ ಅಧಿಕಾರಿಗಳ ಕಿರುಕುಳವೇ ಪದ್ಮವತಿ ಸಾವಿಗೆ ಕಾರಣ ಎಂಬ ಮಾತುಗಳು ಆಕೆಯ ಆಪ್ತ ವಲಯದಲ್ಲಿ ಕೇಳಿ ಬರುತ್ತಿದ್ದು ಈ ಬಗ್ಗೆ ತನಿಖೆ ನಡೆಸುವುದಾಗಿ ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

- Advertisement -

Related news

error: Content is protected !!