- Advertisement -
- Advertisement -





ವಿಟ್ಲ: ನಾಡಿನೆಲ್ಲೆಡೆ ದಸರಾ ಸಂಭ್ರಮ ಕಳೆಗಟ್ಟಿದ್ದು , ವಿಟ್ಲ ಪೊಲೀಸ್ ಠಾಣೆಯಲ್ಲಿ ಇಂದು ಆಯುಧ ಪೂಜೆ ನಡೆಯಿತು.

ಸದಾ ಗತ್ತು ಗಾಂಭೀರ್ಯದಿಂದಿರುವ ಪೊಲೀಸ್ ಠಾಣೆ ವಿವಿಧ ಅಲಂಕಾರಗಳೊಂದಿಗೆ ಕಂಗೊಳಿಸುತ್ತಿತ್ತು. ವಾಹನ, ಪಿಸ್ತೂಲ್, ಬೇಡಿ ಹೀಗೆ ಠಾಣೆಯಲ್ಲಿರುವ ವಸ್ತುಗಳಿಗೆ ಆಯುಧ ಪೂಜೆ ನೆರವೇರಿತು.

ಈ ವೇಳೆ ಠಾಣೆಯ ಇನ್ಸ್ಪೆಕ್ಟರ್ ಹಾಗೂ ಸಬ್ ಇನ್ಸ್ಪೆಕ್ಟರ್ ಸೇರಿದಂತೆ ಎಲ್ಲಾ ಸಿಬ್ಬಂದಿಗಳು ಸಾಂಪ್ರದಾಯಿಕ ಉಡುಗೆ ಧರಿಸಿ ಸಂಭ್ರಮಿಸಿದರು.. ಪೊಲೀಸ್ ಸಿಬ್ಬಂದಿಗಳ ಕುಟುಂಬಸ್ಥರು ಸಹ ಹಬ್ಬದ ಸಡಗರದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.



- Advertisement -