Wednesday, July 22, 2026
spot_imgspot_img
spot_imgspot_img

ಬಸ್-ಪಿಕಪ್‌ ಡಿಕ್ಕಿ

- Advertisement -
- Advertisement -

ಚಿಕ್ಕಮಗಳೂರು: ಸರ್ಕಾರಿ ಬಸ್ ಹಾಗೂ ಪಿಕಪ್ ವಾಹನ ಮುಖಾಮುಖಿ ಡಿಕ್ಕಿಯಾದ ಘಟನೆ ಮೂಡಿಗೆರೆ ತಾಲೂಕಿನ ಹಾಂದಿ ಬಳಿ ಫೆ. 28ರ ಶುಕ್ರವಾರ ನಡೆದಿದೆ.ಪಿಕಪ್ ವಾಹನ ಬಸ್ ನ ಒಂದು ಬದಿಗೆ ತಾಗಿಕೊಂಡು ಹೋದ ಪರಿಣಾಮ, ಪಿಕಪ್ ನ ಒಂದು ಭಾಗ ಮುಂದಿನ ಗಾಜಿಗೆ ಸಿಲುಕಿ ಬಸ್ಸಿನಲ್ಲಿಯೇ ಉಳಿಯಿತು.ಅದೃಷ್ಟವಶಾತ್, ಪಿಕಪ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಅಪಘಾತದಲ್ಲಿ ಗಂಭೀರ ಗಾಯಗಳೇನೂ ಸಂಭವಿಸಿಲ್ಲ.ಪ್ರಾಥಮಿಕ ಮಾಹಿತಿ ಪ್ರಕಾರ, ನಿದ್ದೆಗಣ್ಣಿನಲ್ಲಿದ್ದ ಪಿಕಪ್ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಈ ಘಟನೆ ಸಂಭವಿಸಿದೆ.

ಧರ್ಮಸ್ಥಳದಿಂದ ಚಿಕ್ಕಬಳ್ಳಾಪುರಕ್ಕೆ ತೆರಳುತ್ತಿದ್ದ ಸರ್ಕಾರಿ ಬಸ್ಸಿಗೆ ಪಿಕಪ್ ವಾಹನ ತಾಗಿಕೊಂಡು ಹೋದ ಪರಿಣಾಮ ಪಿಕಪ್ ವಾಹನದಲ್ಲಿದ್ದ ತರಕಾರಿ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿತು.ಆಲ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ದೂರು ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

- Advertisement -

Related news

error: Content is protected !!