- Advertisement -
- Advertisement -


ಕೋಟ: ಬೈಕೊಂದು ಡಿಕ್ಕಿ ಹೊಡೆದ ಪರಿಣಾಮ ರಸ್ತೆ ದಾಟಲು ನಿಂತಿದ್ದ ಪಾದಚಾರಿ ಗಂಭೀರ ಗಾಯಗೊಂಡ ಘಟನೆ ಉಡುಪಿ ರಾಷ್ಟ್ರೀಯ ಹೆದ್ದಾರಿ 66ರ ಕೋಟ ಮಣೂರು ಮಹಾಲಿಂಗೇಶ್ವರ ದೇವಸ್ಥಾನ ಬಳಿ ನಡೆದಿದೆ.
ಗಂಭೀರ ಗಾಯಗೊಂಡ ವ್ಯಕ್ತಿಯನ್ನು ವಸಂತ ಅಣ್ಣಪ್ಪ ಎಂದು ಗುರುತಿಸಲಾಗಿದೆ.
ಅಣ್ಣಪ್ಪ ರಸ್ತೆ ದಾಟಲು ಹೆದ್ದಾರಿ ಪಕ್ಕದಲ್ಲಿ ನಿಂತಿದ್ದ ಸಂದರ್ಭ ಗಣೇಶ್ ಎಂಬುವವನು ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ ಬೈಕನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದಿದ್ದಾನೆ. ಪರಿಣಾಮವಾಗಿ ರಸ್ತೆಯ ತೀರ ಎಡಬದಿಗೆ ಬಂದು ರಸ್ತೆ ದಾಟಲು ನಿಂತಿದ್ದ ವಸಂತ ಅಣ್ಣಪ್ಪ ರವರಿಗೆ ಡಿಕ್ಕಿ ಹೊಡೆದಿರುತ್ತಾನೆ. ಬೈಕ್ ಡಿಕ್ಕಿಯಾದ ಕಾರಣ ವಸಂತ ರವರು ರಸ್ತೆಗೆ ಬಿದ್ದಿದ್ದು ಅವರಿಗೆ ತಲೆಗೆ, ಕಾಲಿಗೆ ತೀವ್ರ ಸ್ವರೂಪದ ಗಾಯವಾಗಿರುತ್ತದೆ. ಅಲ್ಲದೇ ಸವಾರ ಗಾಯಗೊಂಡಿದ್ದು, ಕೂಡಲೇ ಕೋಟ ಜೀವನ್ ಮಿತ್ರ ಆಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು. ಈ ಬಗ್ಗೆ ಕೋಟ ಠಾಣೆಯಲ್ಲಿ ಈ ಘಟನೆ ಕುರಿತು ಪ್ರಕರಣ ದಾಖಲಾಗಿದೆ.
- Advertisement -








