Tuesday, July 21, 2026
spot_imgspot_img
spot_imgspot_img

ಭೀಕರ ಅಪಘಾತ ; ಓರ್ವ ಸಾವು, 8 ಮಂದಿಗೆ ಗಂಭೀರ ಗಾಯ !

- Advertisement -
- Advertisement -

ಓಮ್ನಿ ಕಾರು ಮತ್ತು ಪಿಕಪ್ ವಾಹನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಓರ್ವ ಸ್ಥಳದಲ್ಲೇ ಸಾವನ್ನಪ್ಪಿ 08 ಮಂದಿ ಗಂಭೀರ ಗಾಯಗೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ತಾಳಗುಪ್ಪ ಸಮೀಪದ ಬಲೆಗಾರು ತಿರುವಿನಲ್ಲಿ ಇಂದು ನಡೆದಿದೆ.

ಚಿಕ್ಕಮಗಳೂರು ಜಿಲ್ಲೆಯ ಎನ್‌.ಆರ್‌.ಪುರ ತಾಲ್ಲೂಕಿನ ಶೆಟ್ಟಿಕೊಪ್ಪ ಗ್ರಾಮದ 09 ಜನರು ಜೋಗ ನೋಡಲು ಹೋಗುತ್ತಿದ್ದಾಗ ತಾಳಗುಪ್ಪದಿಂದ ಸಾಗರಕ್ಕೆ ಬರುತ್ತಿದ್ದ ಪಿಕಪ್ ವಾಹನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.ಅಪಘಾತದ ರಭಸಕ್ಕೆ ಓಮ್ನಿಯಲ್ಲಿದ್ದ ಶೆಟ್ಟಿಕೊಪ್ಪದ ಶೇಖರ್ ಎಂಬುವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಎರಡು ವರ್ಷದ ಮಗು ಸೇರಿದಂತೆ ಉಳಿದ ಏಳು ಜನರ ಸ್ಥಿತಿ ಗಂಭೀರವಾಗಿದ್ದು ಅವರನ್ನು ಶಿವಮೊಗ್ಗದ ಮ್ಯಾಕ್ಸ್ ಮತ್ತು ಸರ್ಜಿ ಆಸ್ಪತ್ರೆಗೆ ದಾಖಲಿಸಲಾಗಿದೆ.

- Advertisement -

Related news

error: Content is protected !!