Sunday, July 12, 2026
spot_imgspot_img
spot_imgspot_img

ಸುಳ್ಯ : ಬಸ್‌ ಢಿಕ್ಕಿಯಾಗಿ ವ್ಯಕ್ತಿ ಮೃತ್ಯು!

- Advertisement -
- Advertisement -

ಸುಬ್ರಹ್ಮಣ್ಯ: ಬಸ್‌ ಹತ್ತುವ ಆತುರದಲ್ಲಿ ಓಡಿ ಬಂದ ವೇಳೆ ಬಸ್‌ಗೆ ಢಿಕ್ಕಿಯಾಗಿ 75 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಶನಿವಾರ(ಜು.11) ಮಧ್ಯಾಹ್ನ ಸುಬ್ರಹ್ಮಣ್ಯ ಸಮೀಪದ ಏನೆಕಲ್ಲಿನಲ್ಲಿ ನಡೆದಿದೆ.

ಮೃತರನ್ನು ಏನೆಕಲ್ಲು ಗ್ರಾಮದ ಮುತ್ಲಾಜೆಯ ಚೆನ್ನಪ್ಪ ಗೌಡ (75) ಎಂದು ಗುರುತಿಸಲಾಗಿದೆ. ಪಂಜಕ್ಕೆ ತೆರಳಲು ಏನೆಕಲ್ಲು ಬಸ್‌ ನಿಲ್ದಾಣದಲ್ಲಿ ಕಾಯುತ್ತಿದ್ದ ಚೆನ್ನಪ್ಪ ಗೌಡ ಅವರು, ಸುಬ್ರಹ್ಮಣ್ಯದಿಂದ ಪುತ್ತೂರಿನತ್ತ ತೆರಳುತ್ತಿದ್ದ ಬಸ್ ಬಂದಾಗ ಅದನ್ನು ಹತ್ತುವ ಉದ್ದೇಶದಿಂದ ತುರ್ತಾಗಿ ರಸ್ತೆ ದಾಟಿ ಬಸ್‌ ಕಡೆಗೆ ಓಡಿದ್ದಾರೆ.
ಈ ವೇಳೆ ಬಸ್‌ಗೆ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಪರಿಣಾಮ ತಲೆ ಹಾಗೂ ಎದೆ ಭಾಗಕ್ಕೆ ತೀವ್ರ ಗಾಯಗಳಾಗಿವೆ.

ಸ್ಥಳೀಯರು ಕೂಡಲೇ ಆಂಬುಲೆನ್ಸ್ ಮೂಲಕ ಸುಬ್ರಹ್ಮಣ್ಯ ಆಸ್ಪತ್ರೆಗೆ ರೆದುಕೊಂಡು ಹೋಗಿದ್ದರೂ, ಹೆಚ್ಚಿನ ಚಿಕಿತ್ಸೆಗೆ ಕಡಬ ಆಸ್ಪತ್ರೆಗೆ ರವಾನಿಸಿದ್ದರು. ಆದರೆ ಮಾರ್ಗಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ.

ಮೃತರು ಪತ್ನಿ, ಪುತ್ರ, ಪುತ್ರಿ ಹಾಗೂ ಸೊಸೆಯನ್ನು ಅಗಲಿದ್ದಾರೆ. ಈ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ವರದಿಯಿಂದ ತಿಳಿದುಬಂದಿದೆ.

- Advertisement -

Related news

error: Content is protected !!