



ಸುಳ್ಯ: ಎರಡು ಕೆಎಸ್‌ಆರ್‌ಟಿಸಿ ಬಸ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ 20ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಳ್ಯ ತಾಲೂಕಿನ ಅಡ್ಕಾರು ಬಳಿ ಗುರುವಾರ ಸಂಭವಿಸಿದೆ.ಧರ್ಮಸ್ಥಳದಿಂದ ಮೈಸೂರಿಗೆ ಹೋಗುತ್ತಿದ್ದ ಬಸ್ ಹಾಗೂ ಸುಳ್ಯದಿಂದ ಪುತ್ತೂರಿನೆ ಕಡೆಗೆ ಹೋಗುತ್ತಿದ್ದ ಬಸ್ಸಿನ ನಡುವೆ ಅಡ್ಕಾರು ಬಸ್ ನಿಲ್ದಾಣದ ಬಳಿ ಅಪಘಾತ ಸಂಭವಿಸಿದೆ ಎಂದು ತಿಳಿದು ಬಂದಿದೆ.ಘಟನೆಯಿಂದ ಹೆಚ್ಚಿನ ಪ್ರಯಾಣಿಕರ ಮುಖದ ಭಾಗಕ್ಕೆ ಮತ್ತು ಎದೆ ಭಾಗಕ್ಕೆ ಗುದ್ದಿದ ಗಾಯವಾಗಿದೆ ಎಂದು ತಿಳಿದು ಬಂದಿದೆ.
ದೊಡ್ಡತೋಟ ನಿವಾಸಿ ಮೇಘನಾ, ಪೆರಾಜೆಯ ಬಾಲಚಂದ್ರ ಹಾಗೂ ಪುಂಡ ರಿಕ, ಜುಬೈದಾ, ರವೀಂದ್ರ ಇರ್ದೆ, ಮಡಿಕೇರಿಯ ವಿದ್ಯಾ, ಕಲ್ಲುಗುಂಡಿಯ ಅನುರಾಧಾ, ಹಳೇಗೇಟು ನಿವಾಸಿ ಲಲಿತಾ ಗಂಭೀರ ಗಾಯಗೊಂಡವರು ಎಂದು ತಿಳಿದು ಬಂದಿದೆ.ಘಟನೆಯಲ್ಲಿ ಇನ್ನೂ ಹಲವು ಮಂದಿಗೆ ಸಣ್ಣ-ಪುಟ್ಟ ಗಾಯ ವಾಗಿದೆ.ಡಿಕ್ಕಿ ರಭಸಕ್ಕೆ ಎರಡೂ ಬಸ್‌ಗಳು ಜಖಂಗೊಂಡಿವೆ. ಘಟನಾ ಸ್ಥಳಕ್ಕೆ ಸುಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.ಈ ಕುರಿತು ಸುಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








