Sunday, June 29, 2025
spot_imgspot_img
spot_imgspot_img

ಕಾರ್ಕಳ: ತೀರ್ಥಯಾತ್ರೆಗೆ ತೆರಳುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ : 6 ಮಂದಿಗೆ ಗಾಯ

- Advertisement -
- Advertisement -

ಕಾರ್ಕಳ: ಧರ್ಮಸ್ಥಳ ಕ್ಷೇತ್ರಕ್ಕೆ ತೀರ್ಥಯಾತ್ರೆಗೆ ತೆರಳುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಸೇತುವೆಗೆ ಡಿಕ್ಕಿ ಹೊಡೆದಿರುವ ಘಟನೆ ಅಜೆಕಾರು ಎಂಬಲ್ಲಿ ಸಂಭವಿಸಿದೆ.

ರವಿವಾರ ನಸುಕಿನ ಜಾವ ಸುಮಾರು 5.30ರ ವೇಳೆಗೆ ಅಜೆಕಾರು ಸಮೀಪದ ರಾಜ್ಯ ಹೆದ್ದಾರಿಯ ಸೇತುವೆ ಕಾರು ಡಿಕ್ಕಿ ಹೊಡೆದಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮಂಜುನಾಥ್ ಗೌಡ (28), ಆತ್ಮಾನಂದ (24) ಹನುಮಂತ್ ಗೌಡ (23):ಹಾಲಪ್ಪ ಗೌಡ (24) ವೀರಭದ್ರಗೌಡ (28) ಬಸನಗೌಡ( 27) ಎಂಬವರು ಗಾಯಗೊಂಡಿದ್ದಾರೆ.

ಕಾರಿನ ಮುಂಭಾಗ ಸಂಪೂರ್ಣ ಜಖಂ ಗೊಂಡಿದ್ದು, ಘಟನಾ ಸ್ಥಳಕ್ಕೆ ಅಜೆಕಾರ್108 ಆಂಬುಲೆನ್ಸ್‌ ಸಿಬ್ಬಂದಿ ಘಟನಾಸ್ಥಳಕ್ಕೆ ಅಗಮಿಸಿ ಗಾಯಾಳುಗಳನ್ನು ಉಡುಪಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಅಜೆಕಾರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!