Saturday, April 27, 2024
spot_imgspot_img
spot_imgspot_img

ಮಂಗಳೂರು: ಅಕ್ರಮವಾಗಿ ಮನೆಯಲ್ಲಿ ಕಸಾಯಿಖಾನೆ ದಂಧೆ : ಖಚಿತ ಮಾಹಿತಿ ಮೇರೆಗೆ ಪೊಲೀಸ್‌ ದಾಳಿ -ಮೂವರು ಆರೋಪಿಗಳ ಬಂಧನ

- Advertisement -G L Acharya panikkar
- Advertisement -

ಮಂಗಳೂರು: ಮನೆಯಲ್ಲಿ ಅಕ್ರಮವಾಗಿ ನಡೆಸುತ್ತಿದ್ದ ಕಸಾಯಿಖಾನೆಗೆ ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ದಾಳಿ ನಡೆಸಿ 180 ಕೆ.ಜಿ. ದನದ ಮಾಂಸ ಸಹಿತ ಮೂವರು ಆರೋಪಿಗಳನ್ನು ವಶಕ್ಕೆ ಪಡೆದ ಘಟನೆ ನಗರದ ಹೊರವಲಯದ ವಳಚ್ಚಿಲ್‌ ಎಂಬಲ್ಲಿ ನಡೆದಿದೆ.

ಬಂಧಿತ ಆರೋಪಿಗಳನ್ನು ಅಡ್ಯಾರ್‌ ವಲಚ್ಚಿಲ್‌ ನಿವಾಸಿ ಖಾದರ್‌ ಮಹಮ್ಮದ್‌(52), ಬಂಟ್ವಾಳ ತಾಲೂಕು ಪುದು ಗ್ರಾಮದ ಮಾರಿಪಳ್ಳ ನಿವಾಸಿ ಇಸ್ಮಾಯಿಲ್‌(27), ಅಡ್ಯಾರ್‌ ಪದವು ನಿವಾಸಿ ಮಹಮ್ಮದ್‌ ಶಮೀರ್‌(18) ಎಂದು ಗುರುತಿಸಲಾಗಿದೆ.

ಆರೋಪಿ ವಳಚ್ಚಿಲ್ ಖಾದರ್ ಮಹಮ್ಮದ್ ಮನೆಯ ಶೆಡ್‌ನಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಕಡಿದು ಮಾಂಸ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ, 180 ಕೆ.ಜಿ. ದನದ ಮಾಂಸ ಸಹಿತ ಮೂವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಗಳ ವಿರುದ್ಧ ಅ.ಕ್ರ 24/2024, ಕಲಂ 4,5,7,12 ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧ್ಯಾದೇಶ ೨೦೨೦ ರಂತೆ ಪ್ರಕರಣ ದಾಖಲಿಸಿಕೊಂಡು ನ್ಯಾಯಲಯಕ್ಕೆ ಹಾಜರುಪಡಿಸಲಾಗಿದೆ.

ಈ ಪ್ರಕರಣದ ಪತ್ತೆ ಕಾರ್ಯವನ್ನು ಪೊಲೀಸ್‌ ಆಯುಕ್ತರಾದ ಅನುಪಮ ಅಗರವಾಲ್‌ ಅವರ ನಿದೇರ್ಶನದಂತೆ , ಸಿದ್ದಾರ್ಥ ಐಪಿಎಸ್‌ ಪೊಲೀಸ್‌ ಉಪ ಆಯುಕ್ತರು, ದಿನೇಶ್‌ ಕುಮಾರ ಪೊಲೀಸ್‌ ಉಪ ಆಯುಕ್ತರು(ಅಪರಾಧ ಮತ್ತು ಸಂಚಾರ) ಮಾರ್ಗದರ್ಶದಂತೆ ಮಂಗಳೂರು ದಕ್ಷಿಣ ವಿಭಾಗದ ಸಹಾಯಕ ಪೊಲೀಸ್‌ ಆಯುಕ್ತರಾದ ಧನ್ಯಾ ನಾಯಕ್‌ ಅರವರ ನೇತೃತ್ವದದಲ್ಲಿ ಗ್ರಾಮಾಂತ ಪೊಲೀಸ್‌ ರಾಣಾ ಪೊಲೀಸ್‌ ನಿರೀಕ್ಷಕರಾದ ಶಿವಕುಮಾರ್‌, ಅರುಣ್‌ಕುಮಾರ್‌ ಪಿಎಸ್‌ಐ-1, ರಾಮ ನಾಯ್ಕ ಪಿಎಸ್‌ಐ-3 ಠಾಣಾ ಸಿಬ್ಬಂದಿಗಳು ಸಹಕಾರಿಸಿದ್ದಾರೆ.

- Advertisement -

Related news

error: Content is protected !!