- Advertisement -
- Advertisement -


ಕಡಬ: ಸುಬ್ರಹ್ಮಣ್ಯ-ಉಪ್ಪಿನಂಗಡಿ ರಾಜ್ಯ ಹೆದ್ದಾರಿಯ ಕಡಬ ಸಮೀಪದ ದೇರಾಜೆ ಕ್ರಾಸ್ ನಲ್ಲಿ ಬಸ್ ಮತ್ತು ಮಿನಿ ಗೂಡ್ಸ್ ನಡುವೆ ಅಪಘಾತ ಸಂಭವಿಸಿದ್ದು ಚಾಲಕ ಹಾಗೂ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ನ.25 ರಂದು ಮಧ್ಯಾಹ್ನ ನಡೆದಿದೆ.
ಕಡಬದಿಂದ ಶಾಂತಿಮೊಗರು ಮಾರ್ಗದ ಮೂಲಕ ಪುತ್ತೂರಿಗೆ ತೆರಳುತ್ತಿದ್ದ ಸರ್ಕಾರಿ ಬಸ್ ಮತ್ತು ಬಲ್ಯದಿಂದ ಕಡಬದತ್ತ ಸಂಚರಿಸುತ್ತಿದ್ದ ಮಿನಿ ಗೂಡ್ಸ್ ನಡುವೆ ಅಪಘಾತ ಸಂಭವಿಸಿರುವುದಾಗಿದೆ. ಬಸ್ ನ ಗಾಜು ಹಾನಿಯಾದ್ರೆ ಗೂಡ್ಸ್ ವಾಹನದ ಮುಂಭಾಗ ಜಖಂ ಆಗಿದೆ.ವೇಗದ ಚಾಲನೆಯೇ ಈ ರಸ್ತೆ ಅಪಘಾತಕ್ಕೆ ಕಾರಣ ಎನ್ನಲಾಗಿದ್ದು ಸಣ್ಣ ಪ್ರಮಾಣದ ಗಾಯಗಳೊಂದಿಗೆ ಚಾಲಕ ಮತ್ತು ಪ್ರಯಾಣಿಕರು ಪಾರಾಗಿದ್ದಾರೆ. ಕಡಬ ಪೊಲೀಸರಿಗೆ ಮಾಹಿತಿ ರವಾನಿಸಲಾಗಿದೆ.
- Advertisement -








