- Advertisement -
- Advertisement -



ಪುತ್ತೂರು: ಸೇಡಿಯಾಪು ಬಳಿಯ ಕಾಪು ಬಳಿಸರಕು ಸಾಗಣೆಯ ಟಾಟಾ ಏಸ್ ವಾಹನವೊಂದು ಪಲ್ಟಿಯಾಗಿ 11 ವರ್ಷದ ಬಾಲಕ ಗಾಯಗೊಂಡಿರುವ ಘಟನೆ ಜು.23ರಂದು ನಡೆದಿದೆ.
ಕೊಯಿಲಾದ ಸನ್ಯಾಸಿಗುಡ್ಡೆ ನಿವಾಸಿ ಅಬ್ದುಲ್ ಮಜೀದ್ ಅವರು ಉಪ್ಪಿನಂಗಡಿಯಿಂದ ಪುತ್ತೂರು ಕಡೆಗೆ ಟಾಟಾ ಏಸ್ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಅಪಘಾತ ಸಂಭವಿಸಿದ್ದು, ವಾಹನದ ಚಕ್ರಗಳು ರಸ್ತೆಯಂಚಿಗೆ ಇಳಿದು ಮಗುಚಿ ಬಿತ್ತು ಎಂದು ತಿಳಿದುಬಂದಿದೆ.
ವಾಹನದಲ್ಲಿ ಪ್ರಯಾಣಿಸುತ್ತಿದ್ದ ಅಬ್ದುಲ್ ಮಜೀದ್ ಅವರ ಪುತ್ರ ಮೊಹಮ್ಮದ್ ಅಮೀನ್(11) ಅಪಘಾತದಲ್ಲಿ ಗಾಯಗೊಂಡಿದ್ದಾರೆ.
ಸ್ಥಳದಲ್ಲಿ ಕಾಂಕ್ರೀಟ್ ರಸ್ತೆ ಕಾಮಗಾರಿಗಳು ಇತ್ತೀಚೆಗೆ ಪೂರ್ಣಗೊಂಡಿವೆ, ರಸ್ತೆಯಂಚಿಗೆ ಮಣ್ಣು ಹಾಕದ್ದರಿಂದ ಅದು ಆಳವಿದೆ. ಅಲ್ಲದೇ, ಡಿವೈಡರ್ ಕಾಮಗಾರಿಯೂ ಇಲ್ಲಿ ನಡೆಯದಿರುವುದರಿಂದ ವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತಗಳಾಗುವ ಸಾಧ್ಯತೆ ಇದೆ ಎಂಬುದಾಗಿ ಸ್ಥಳೀಯರು ತಿಳಿಸಿದ್ದಾರೆ.
ಈ ಸಂಬಂಧ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವುದಾಗಿ ವರದಿ ಮೂಲಕ ತಿಳಿದುಬಂದಿದೆ.
- Advertisement -








