Friday, July 24, 2026
spot_imgspot_img
spot_imgspot_img

ಪುತ್ತೂರು: ದ್ವಿಚಕ್ರ – ಪಿಕಪ್ ಅಪಘಾತ

- Advertisement -
- Advertisement -

ಪುತ್ತೂರು: ಸುಬ್ರಹ್ಮಣ್ಯ ಮಂಜೇಶ್ವರ ರಾಜ್ಯ ಹೆದ್ದಾರಿಯ ನರಿಮೊಗರು ಅರಣ್ಯ ಇಲಾಖೆಯ ಕಛೇರಿ ಸಮೀಪ ದ್ವಿಚಕ್ರ ವಾಹನ ಹಾಗೂ ಪಿಕಪ್ ನಡುವೆ ಅಪಘಾತ ನಡೆದು ಇಬ್ಬರು ಸವಾರರಿಗೆ ಗಂಭೀರ ಗಾಯವಾಗಿದೆ.

ಸಹ ಸಾವರ ಸುಳ್ಯ ಚೊಕ್ಕಾಡಿ ಮೂಲದ ಗೌತಮ್ (26) ಗಂಭೀರ ಗಾಯಗೊಂಡಿದ್ದು ಅವರ ಸ್ಥಿತಿ ಚಿಂತಾಜನಕವಾಗಿದೆ. ಸುಳ್ಯ ಕೊಡಿಯಾಳ ಮೂಲದ ಲೋಲಾಕ್ಷಾ (24) ಗಾಯಗೊಂಡಿದ್ದಾರೆಬೆಳ್ಳಾರೆಯ ಕಡೆಯಿಂದ ಕೂಲಿ ಕೆಲಸ ನಡೆಸುವ ಇಬ್ಬರು ಹಿಂದಿರುಗುವ ಸಮಯದಲ್ಲಿ ಘಟನೆ ನಡೆದಿದೆ ಎನ್ನಲಾಗಿದೆ.

ಅಪಘಾತದ ತೀವ್ರತೆಗೆ ಹಿಂಬದಿ ಸವಾರ ಎಸೆಯಲ್ಪಟ್ಟಿದ್ದು, ತಲೆಗೆ ಗಂಭೀರ ಗಾಯವಾಗಿದೆ. ಸವಾರನ ಕಾಲಿಗೆ ತೀವ್ರ ತರವಾದ ಗಾಯವಾಗಿದೆ.ಗಾಯಾಳುಗಳು ರಸ್ತೆಯಲ್ಲೇ ಬಿದ್ದು 10-15 ನಿಮಿಷಗಳ ಕಾಲ ನರಳಾಡುತ್ತಿದ್ದರೂ ಬಹಳಷ್ಟು ಮಂದಿ ಸುತ್ತ ನಿಂತು ನೋಡಿದ್ದೆ ಹೊರತು ಯಾರೋಬ್ಬರು ಅವರನ್ನು ಆಸ್ಪತ್ರೆಗೆ ದಾಖಲಿಸುವ ಹಾಗೂ ಅರೈಕೆ ಮಾಡಲು ಮುಂದಾಗಿಲ್ಲ ಎಂದು ತಿಳಿದು ಬಂದಿದೆ. ಅಂಬ್ಯುಲೆನ್ಸ್‌ ಗಾಗಿ 108ಕ್ಕೆ ಕರೆ ಮಾಡಿದರೂ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಸುಮಾರು ಸಮಯದ ಬಳಿಕ ಖಾಸಗೀ ವಾಹನದ ಮೂಲಕ ಸಾಗಿಸಿ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಥಮಿಕ ಚಿಕಿತ್ಸೆ ನೀಡಿ ಇಬ್ಬರು ಗಾಯಾಳುಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ರವಾನಿಸಲಾಗಿದೆ.

- Advertisement -

Related news

error: Content is protected !!