- Advertisement -
- Advertisement -
ಮಂಗಳೂರು : ಕಂಟೈನರ್ ಲಾರಿಯೊಂದು ಸ್ಕೂಟರ್ ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ನಲ್ಲಿದ್ದ ಸಹಸವಾರೆ ಸ್ಥಳದಲ್ಲೇ ಸಾವನಪ್ಪಿದ ಘಟನೆ ಕೂಳೂರು ಸೇತುವೆ ಬಳಿ ನಡೆದಿದೆ
ಮೃತರನ್ನು ಲಾವಣ್ಯ (27) ಎಂದು ಗುರುತಿಸಲಾಗಿದೆ.
ಲಾವಣ್ಯ ಅವರು ತಮ್ಮ ಪತಿ ಶಕೀಲ್ ಸುವರ್ಣರವರ ಜೊತೆ ಸ್ಕೂಟರ್ ನಲ್ಲಿ ಪಣಂಬೂರಿನಿಂದ ಕಾವೂರು ಕಡೆಗೆ ತೆರಳುತ್ತಿದ್ದ ವೇಳೆ ಕೂಳೂರು ಸೇತವೆ ಬಳಿ ಕಂಟೈನರ್ ಲಾರಿ ಚಾಲಕ ಅಜಾಗರೂಕತೆಯಿಂದ ಚಲಾಯಿಸಿ ಸ್ಕೂಟರ್ ಗೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ಇಬ್ಬರೂ ಸ್ಕೂಟರ್ ನಿಂದ ರಸ್ತೆಗೆ ಬಿದ್ದಿದ್ದು, ಲಾವಣ್ಯ ಅವರ ತಲೆ ಮೇಲೆ ಲಾರಿಯ ಹಿಂಭಾಗದ ಚಕ್ರ ಹರಿದಿದ್ದು, ಅವರು ಸ್ಥಳದಲ್ಲೇ ಸಾವನಪ್ಪಿದ್ದಾರೆ. ಶಕೀಲ್ ಸುವರ್ಣ ರವರು ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.
- Advertisement -